ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದು, ದೇಶವನ್ನು ವಿಭಜಿಸುವ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದನ್ನು ಮುಂದುವರಿಸಿರುವ ರಾಹುಲ್ ಗಾಂಧಿ ದೇಶದ ಏಕತೆಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ʼಲವ್ ಜಿಹಾದ್ʼ ಪ್ರಕರಣ: ಕಲಾಪದಲ್ಲಿ ಮಾಹಿತಿ ಕೊಟ್ಟ ಸಚಿವ
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಲಂಡನ್ ನ ಕೇಂಬ್ರಿಡ್ಜ್ ಯೂನಿರ್ವಸಿಟಿಯಲ್ಲಿ ಉಪನ್ಯಾಸ ನೀಡುತ್ತಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಆರೋಪ ಹೊರಿಸಿರುವುದನ್ನು ಉಲ್ಲೇಖಿಸಿ ರಿಜಿಜು ಈ ವಾಗ್ದಾಳಿ ನಡೆಸಿದ್ದಾರೆ.
ಸ್ವಯಂಘೋಷಿತ ಕಾಂಗ್ರೆಸ್ ನ ರಾಜಕುಮಾರ ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ. ರಾಹುಲ್ ಗಾಂಧಿ ಪಪ್ಪು ಎಂಬುದು ಭಾರತೀಯರಿಗೆ ಗೊತ್ತು, ಆದರೆ ವಿದೇಶಿಯರಿಗೆ ಈತನೇ ನಿಜವಾದ ಪಪ್ಪು ಎಂಬುದು ತಿಳಿದಿಲ್ಲ ಎಂದು ರಿಜಿಜು ಟ್ವೀಟ್ ನಲ್ಲಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿಯ ಮೂರ್ಖ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ, ಆದರೆ ರಾಹುಲ್ ಗಾಂಧಿಯ ಭಾರತ ವಿರೋಧಿ ಹೇಳಿಕೆಯನ್ನು ಭಾರತ ವಿರೋಧಿ ಶಕ್ತಿಗಳು ದೇಶದ ವರ್ಚಸ್ಸನ್ನು ಹಾಳು ಮಾಡಲು ದುರುಪಯೋಗಪಡಿಸಿಕೊಳ್ಳುತ್ತಿರುವುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ರಿಜಿಜು ಹೇಳಿದ್ದಾರೆ.