ಕಲ್ಯಾಣಿ (ಪಶ್ಚಿಮ ಬಂಗಾಲ): “ಅಂಪಾಯರ್ ವಿನಿಮಯ ಕಾರ್ಯಕ್ರಮ’ದಂತೆ ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಮುಖಾಮುಖೀಯಲ್ಲಿ ಇಂಗ್ಲೆಂಡಿನ ಅಂಪಾಯರ್ ಮಾರ್ಟಿನ್ ಸ್ಯಾಗರ್ ಕಣಕ್ಕಿಳಿದಿದ್ದಾರೆ. ಗುರುವಾರ ಇಲ್ಲಿ ಆರಂಭಗೊಂಡ ಆತಿಥೇಯ ಬಂಗಾಲ-ವಿದರ್ಭ ನಡುವಿನ ಪಂದ್ಯ ಕ್ಕಾಗಿ ಅವರು ನಂದ ಕಿಶೋರ್ ಜತೆ ಫೀಲ್ಡ್ ಅಂಪಾಯರ್ ಆಗಿ ಕರ್ತವ್ಯ ನಿಭಾಯಿಸಿದರು.
ದೇಶಿ ಕ್ರಿಕೆಟ್ ಸರಣಿಯಲ್ಲಿ ವಿದೇಶಿ
ಅಂಪಾಯರ್ ಒಬ್ಬರು ಅಂಗಳಕ್ಕಿಳಿ ದದ್ದು ವೀಕ್ಷಕರಿಗೆ ಅಚ್ಚರಿಯಾಗಿ ಕಂಡಿತು. ಆದರೆ ಇದಕ್ಕೆ ಸಂಬಂಧಿಸಿ ದಂತೆ 2013ರಲ್ಲೇ ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಇದರಂತೆ ವರ್ಷಂಪ್ರತಿ ಇಂಗ್ಲೆಂಡಿನ ಅಂಪಾಯರ್‌ಗಳು ಭಾರತದ ದೇಶಿ ಕ್ರಿಕೆಟ್‌ನಲ್ಲೂ, ಭಾರತದ ತೀರ್ಪುಗಾರರು ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಕರ್ತವ್ಯ ನಿಭಾಯಿ ಸಬೇಕಿತ್ತು.
ಇದಕ್ಕೆ “ಅಂಪಾಯರ್ ಎಕ್ಸ್‌ಚೇಂಜ್ ಪ್ರೋಗ್ರಾಂ’ ಎಂದು ಹೆಸರು. ಭವಿಷ್ಯದ ಅಂಪಾಯರ್‌ಗಳಿಗೆ ಉತ್ತೇಜನ ಕೊಡುವ ಸಲುವಾಗಿ ಟೆಸ್ಟ್ ಮಾನ್ಯತೆ ಪಡೆದ ಎಲ್ಲ ರಾಷ್ಟ್ರಗಳೂ ಇದನ್ನು ಅನುಸರಿಸುತ್ತಿವೆ.
ಇದರಂತೆ ಈ ವರ್ಷ ಇಂಗ್ಲೆಂಡಿನಿಂದ ಮಾರ್ಟಿನ್ ಸ್ಯಾಗರ್ ಭಾರತಕ್ಕೆ ಆಗ ಮಿಸಿದ್ದಾರೆ. ಭಾರತದ ನಿತಿನ್ ಮೆನನ್ ಈಗಾಗಲೇ ಇಂಗ್ಲೆಂಡಿಗೆ ತೆರಳಿ ಅಲ್ಲಿನ ಕೆಲವು ಕೌಂಟಿ ಪಂದ್ಯಗಳಲ್ಲಿ ಕರ್ತವ್ಯ ನಿಭಾಯಿಸಿ ಬಂದಿದ್ದಾರೆ. ಜೂ. 9ರಿಂದ 12ರ ತನಕ ನಡೆದ ಲೀಸೆಸ್ಟರ್‌ಶೈರ್-ಸಸೆಕ್ಸ್ ಹಾಗೂ ಜೂ. 19ರಿಂದ 22ರ ತನಕ ನಡೆದ ವೂರ್ಸ್ಟರ್‌ಶೈರ್-ಕೆಂಟ್ ನಡುವಿನ ಪಂದ್ಯದ ವೇಳೆ ಮೆನನ್ ಅಂಪಾಯರ್ ಆಗಿದ್ದರು.