Advertisement

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

06:11 PM Sep 10, 2024 | Team Udayavani |

ಈ ಬಾರಿಯ ಗಣೇಶ ಚತುರ್ಥಿಯ ಸಡಗರ ಸಂಭ್ರಮ ನೇೂಡುವ ಸೌಭಾಗ್ಯ ದೊರಕಿದ್ದು ವಿದೇಶಿ ನೆಲದಲ್ಲಿ..ಅದು ಕೂಡಾ ಅಬುಧಾಬಿಯ ಪವಿತ್ರವಾದ ಹಿಂದು ಮಂದಿರದ ಆಕಷ೯ಣಿಯ ನೆಲದಲ್ಲಿ. ಇಲ್ಲಿ ನಮ್ಮ ಗಣಪತಿಯ ದರ್ಶನದ ಜೊತೆಗೆ ಇಡೀ ಹಿಂದು ಮಂದಿರದ ಒಳಗಿರುವ ವಿಶ್ವ ಭಾತೃತ್ವದ ದರ್ಶನವೂ ಆಯಿತು. ದು ಮಂದಿರದ ಲೇೂಕಾಪ೯ಣೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೇೂದಿಯವರು ನೀಡಿದ ಸಂದೇಶದ ನುಡಿಯಂದರೆ “Hindu Mandir is the symbol of shared haritage of humanity” ಅಬುಧಾಬಿಯ ಹಿಂದು ಮಂದಿರ ಪ್ರವೇಶಿಸಿದ ತಕ್ಷಣವೇ ವಿಶ್ವ ಭಾತೃತ್ವದ ವಸುದೈವ ಕುಟುಂಬಕಂ ಅನ್ನುವ ಸಂದೇಶ ಎದ್ದು ಕಾಣುತ್ತದೆ.

Advertisement

ಭಾರತದ ವಿವಿಧ ರಾಜ್ಯಗಳಿಂದ ಸರ್ವ ಧರ್ಮದ ಯಾತ್ರಾರ್ಥಿ ಪ್ರವಾಸಿಗರ ಜೊತೆ ಜೊತೆಗೆ ವಿಶ್ವದ ವಿವಿಧ ರಾಷ್ಟ್ರಗಳಿಂದ ಈ ಹಿಂದು ಮಂದಿರದ ಸೌಂದರ್ಯತೆಯ ವಾಸ್ತು ವಿನ್ಯಾಸ ನೇೂಡಿ ಕಣ್ಣು ತುಂಬಿಸಿಕೊಳ್ಳಬೇಕು ಎನ್ನುವ ಲಕ್ಷೇೂಪ ಲಕ್ಷ ಪ್ರವಾಸಿಗರನ್ನು ಸೆಳೆಯು ಶಕ್ತಿ ಈ ಭವ್ಯ ಹಿಂದು ಮಂದಿರಕ್ಕಿರುವ ವಿಶೇಷ ಆಕರ್ಷಕ ವ್ಯಕ್ತಿತ್ವವೂ ಹೌದು.

ಈ ಹಿಂದು ಮಂದಿರದ ಒಳಗೆ ಹಿಂದುಗಳು ಆರಾಧಿಸುವ ವಿವಿಧ ದೇವರುಗಳ ಕಳೆ ತುಂಬಿದ ವಿಗ್ರಹಗಳನ್ನು ನೇೂಡ ಬಹುದು.ಹಾಲು ಬಿಳುಪಿನ ಮಾರ್ಬಲುಗಳಲ್ಲಿ ಕೆತ್ತಿದ ದೇವತಾ ವಿಗ್ರಹಗಳನ್ನು ನೇೂಡುವುದೆ ಒಂದು ಸುವರ್ಣಾ ವಕಾಶ. ರಾಧಾಕೃಷ್ಣ, ರಾಮ ಸೀತಾ, ಲಕ್ಷ್ಮಣ ಹನುಮಂತ, ಶಿವ ಪಾರ್ವತಿ, ಗಣೇಶ ಕಾತೆ೯ಕೆಯ, ಇದರ ಜೊತೆಗೆ ಶ್ರೀನಿವಾಸ ಅಯ್ಯಪ್ಪ.. ನೆನಪಿಸುವ ಶಿಲೆಯ ಮೂರ್ತಿಗಳನ್ನು ನೇೂಡಿ ಆನಂದಿಸ ಬಹುದು.

Advertisement

ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಢದಾದ ಹಿಂದು ಮಂದಿರ ಅನ್ನುವುದರ ಹೆಗ್ಗಳಿಕೆಯ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಸಾಂಪ್ರದಾಯಿಕವಾಗಿ ರೂಪಿತವಾದ ಮೊದಲ ಹಿಂದು ಮಂದಿರ ಅನ್ನುವ ಕೀರ್ತಿಯೂ ಇದೆ. ಎರಡು ಭವ್ಯ ಗೇೂಪುರಗಳು ಏಳು ಶಿಖರಗಳನ್ನು ಹೊಂದಿರುವ ಈ ಹಿಂದು ಮಂದಿರ ಯು.ಎ.ಇ.ಯ ಏಳು ಎಮಿರೇಟ್ಸ್ ಗಳನ್ನು ಸಂಕೇತಿಸುವ ರೀತಿಯಲ್ಲಿ ರಾಜಧಾನಿ ಅಬುಧಾಬಿ ಕೇಂದ್ರದಲ್ಲಿ ಮೈದೆಳೆದು ನಿಂತಿದೆ.


ಮಂದಿರದ ಒಳಾಂಗಣದಲ್ಲಿ ರಾಮಾಯಣ ಮಹಾಭಾರತ, ಶಿವ ಪುರಾಣ, ಭಾಗವತಂ ಮುಂತಾದ, ಪುರಾಣಗಳನ್ನು ಪರಿಚಯಿಸುವ ಸುಂದರವಾದ ಛಾಯಾಂಕಣದಿಂದ ಅಲಂಕೃತ ಗೇೂಡೆಗಳನ್ನು ನೇೂಡಿ ಕಣ್ಣು ತುಂಬಿಸಿಕೊಳ್ಳ ಬಹುದು.

ಆಬುಧಾಬಿಯ ಹಿಂದು ಮಂದಿರದ ಹಿಂದೆ ಸರ್ವ ಧರ್ಮೀಯರ ಪ್ರೀತಿಯ ಶ್ರಮವಿದೆ ಸೌಹಾರ್ದತೆಯ ಮನಸ್ಸು ಇದೆ. ಈ ಮಂದಿರದ ನಿರ್ಮಾಣಕ್ಕೆ ಸುಮಾರು 27 ಎಕ್ರೆ ಜಾಗ ನೀಡಿದ್ದು ಯು ಎ.ಇ ಸರ್ಕಾರ ಅಂದರೆ ಮುಸ್ಲಿಂ ರಾಜರು, ಆರ್ಕಿಟೆಕ್ಟ್‌ ಕೆಥೇೂಲಿಕ್ ಕ್ರಿಶ್ಚಿಯನ್‌, ರಚನಾ ನಿರ್ಮಾಣ ನಿರ್ವಹಣಾ ಜವಾಬ್ದಾರಿ ಸಿಖ್ ಸಮುದಾಯ, ಕೆಲಸ ನಿರ್ವಹಿಸಿದವರು ಪಾರ್ಸಿ ಬಂಧುಗಳು, ಪಂಚಾಂಗ ರೂಪಿಸಿದವರು ಬೌದ್ದ ಸಮುದಾಯದವರು..ಒಟ್ಟಿನಲ್ಲಿ ಅಬುಧಾಬಿಯ ಹಿಂದು ಮಂದಿರ ಸವ೯ಧಮ೯ಗಳ ಪ್ರೀತಿ ಸೌಹಾರ್ದತೆಯ ನೆಲೆಬೀಡು ಎಂದರೂ ತಪ್ಪಾಗಲಾರದು. ಒಂದು ರೀತಿಯಲ್ಲಿ ಇದೊಂದು “ಟೆಂಪಲ್ ಟ್ಯೂರಿಸಂ”ನ ಅದ್ಬುತವಾದ ಪರಿಕಲ್ಪನೆಯ ಆರಾಧನಾ ತಾಣವೂ ಹೌದು.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ .ಉಡುಪಿ (ಅಬುಧಾಬಿಯಿಂದ)

Advertisement

Udayavani is now on Telegram. Click here to join our channel and stay updated with the latest news.

Next