Advertisement
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮಾದಕ ವಸ್ತು ದಂಧೆಯಲ್ಲಿ ಮುಖ್ಯವಾಗಿ ವಿದೇಶಿ ವಿದ್ಯಾರ್ಥಿಗಳು ಶಾಮೀಲಾಗಿರುವ ಸುಳಿವು ಸಿಕ್ಕಿದೆ. ಸಂಬಂಧಪಟ್ಟ ದೇಶದ ರಾಯಭಾರಿಗಳಿಗೆ ವಿದೇಶಾಂಗ ಸಚಿವಾಲಯದ ಮೂಲಕ ತಿಳಿಸುತ್ತೇವೆ. ಅವರು ಅಪರಾಧ ಎಸಗಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮರಳು ದಂಧೆಗೆ ಕಡಿವಾಣ
ಭೀಮಾ ನದಿಯಲ್ಲಿ ಬಹಳ ದಿನಗಳಿಂದ ಮರಳು ದಂಧೆ ನಡೆಯುತಿದ್ದು, ಜಿಲ್ಲಾಧಿಕಾರಿ ಸಹಕಾರದೊಂದಿಗೆ ಇಂತಹ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
Related Articles
Advertisement
ಮರಳು ದಂಧೆ ನಿಯಂತ್ರಿಸುವುದು ಕಂದಾಯ, ಗಣಿ ಹಾಗೂ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯಾಗಿದ್ದು, ಪೊಲೀಸ್ ಇಲಾಖೆ ಇದಕ್ಕೆ ಸಹಕಾರ ಕೊಡಲಿದೆ. ಸಂಬಂಧಿಸಿದ ಇಲಾಖೆ ಜತೆಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆಯೂ ವಿವಿಧ ಜಿಲ್ಲೆಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಇದನ್ನು ಆದಷ್ಟು ನಿಯಂತ್ರಿಸಿದ್ದೇವೆ. ಉಡುಪಿಯಲ್ಲಿ ಜಿಲ್ಲಾಧಿಕಾರಿ ಮೇಲೆಯೇ ಲಾರಿ ಹರಿಸಲು ಯತ್ನಿಸಿದ ಪ್ರಕರಣವೂ ನಡೆದಿದೆ. ಅಂತಹ ಪ್ರಕರಣ ನಿಯಂತ್ರಣಕ್ಕೆ ಬಂದಿದೆ ಎಂದು ವಿವರಿಸಿದರು.
ಕನಿಷ್ಠ ವರ್ಗಾವಣೆ: ಪೊಲೀಸ್ ವರ್ಗಾವಣೆ ದಂಧೆ ಬಗ್ಗೆ ಉತ್ತರಿಸಿದ ಅವರು, ಪೊಲೀಸ್ ವರ್ಗಾವಣೆ ದಂಧೆ ನಡೆಸಲು ನಾನು ಬಿಡುವುದಿಲ್ಲ. ಕನಿಷ್ಠ ವರ್ಗಾವಣೆ ನಡೆಸಲಾಗುವುದು. ಪಿಎಸ್‌ಐ ನೇಮಕ ಹಗರಣ ಕುರಿತು ನ್ಯಾಯಾಲಯ ನಿರ್ದೇಶನ ನೀಡುವ ಆಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.