Advertisement

ವಿದೇಶಗಳಲ್ಲಿ ತಾಜ್‌ ಸುದ್ದಿ

07:00 AM Oct 05, 2017 | |

ನವದೆಹಲಿ: ಪ್ರೀತಿಯ ಸಂಕೇತ ಎಂದೇ ಬಣ್ಣಿಸಲಾಗುವ ತಾಜ್‌ ಮಹಲ್‌ ನಿರ್ಲಕ್ಷ್ಯ ಕ್ಕೊಳಗಾಗಿದ್ದು, ಪರಿಣಾಮ ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವೂ ಆಗಿದೆ ಎಂದು ವಿದೇಶಿ ಮಾಧ್ಯಮಗಳು ಹೇಳುತ್ತಿವೆ.

Advertisement

ಮುಸ್ಲಿಂ ಇತಿಹಾಸ ಇರುವ ಕಾರಣಕ್ಕಾಗಿ ತಾಜ್‌ ಮಹಲ್‌ ಅನ್ನು ನಿರ್ಲಕ್ಷಿಸಲಾಗುತ್ತಿದೆ. ತಾಜ್‌ಮಹಲ್‌ ಇರುವ ಉತ್ತರ ಪ್ರದೇಶ ಆಡಳಿತ ಈಗ ಹಿಂದುತ್ವ ಪ್ರತಿಪಾದಕರ ಕೈಯಲ್ಲಿದೆ. ಸರ್ಕಾರವು ವಿಶ್ವ ಪರಂಪರೆಯ ತಾಜ್‌ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒಲವು ತೋರುತ್ತಿಲ್ಲ. ಅನುದಾನವೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಆರೋಪಿಸಿವೆ.

ರಾಜ್ಯಾಡಳಿತ ಅಪ್ಪಟ ಹಿಂದೂ ಪ್ರತಿಪಾದಕ ಯೋಗಿ ಆದಿತ್ಯನಾಥ್‌ ಕೈಯಲ್ಲಿದ್ದು, “ಇತ್ತೀ ಚೆಗಷ್ಟೆ ಅವರು ರ್ಯಾಲಿಯೊಂದರಲ್ಲಿ ಪಾಲ್ಗೊಂಡು ತಾಜ್‌ಮಹಲ್‌ ಬಗ್ಗೆ ಮಾತ ನಾಡುತ್ತ, ಅದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ’ ಎಂದು ಹೇಳಿದ್ದರು. ಈ ಬೆನ್ನಿಗೇ, ಕಳೆದ ವಾರ ರಾಜ್ಯ ಪ್ರವಾಸೋದ್ಯಮ ಮುದ್ರಿಸಿದ ಹೊಸ ಕರಪತ್ರದಿಂದಲೂ ಪ್ರೇಮಸೌಧದ ಹೆಸರನ್ನು ಕೈಬಿಡಲಾಗಿದೆ. ಇದು ನಿರ್ಲಕ್ಷಿಸುತ್ತಿರುವುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂ Ì, “ಪ್ರವಾಸೋದ್ಯಮದ ಅಧಿಕೃತ ಕರಪತ್ರದಲ್ಲಿ ತಾಜ್‌ಮಹಲ್‌ ಕೈಬಿಟ್ಟರೆ ಅದು ಹಾಸ್ಯಾಸ್ಪದ ಹಾಗೂ ದುರಂತದ ಸಂಗತಿ. ಹ್ಯಾಮ್‌ಲೆಟ್‌ ಇಲ್ಲದೆ, ಡೆನ್ಮಾರ್ಕ್‌ನ ರಾಜ ಎಂದು ಹೇಳಿದಂತೆ’ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next