ವಿಶ್ವಪ್ರಸಿದ್ಧ ಜಾದೂಗಾರ ಮಾಡುವ ಕಣ್ಕಟ್ಟನ್ನು ಎಂದಾದರೂ ನೋಡಿದ್ದೀರಾ? ನೋಡೋ ಅವಕಾಶ ಸಿಗಲೇ ಇಲ್ಲ ಅಂತ ಹೇಳುವವರಿಗೆ ಇಲ್ಲಿದೆ ಅವಕಾಶ. ರಷ್ಯಾದ ಖ್ಯಾತ ಜಾದೂಗಾರ ಅಲೆಕ್ಸ್ ಅವರ ಜಾದೂ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ರಷ್ಯಾದ ಸರಟೊವ್‌ನಲ್ಲಿ ಜನಿಸಿದ ಅಲೆಕ್ಸ್ ಅಲ್ಲಿನ ಸರ್ಕಸ್ ಕಾಲೇಜಿನಲ್ಲಿ ಪದವಿ ಪಡೆದಿ¨ªಾರೆ. 13 ವರ್ಷಗಳ ವೃತ್ತಿಜೀವನದಲ್ಲಿ ಅಲೆಕ್ಸ್, ಅಮೆರಿಕಾ, ಚೀನಾ, ರಷ್ಯಾ, ಮೆಕ್ಸಿಕೊ, ಜರ್ಮನಿ, ಪೋಲೆಂಡ್, ಟರ್ಕಿ, ದುಬೈ, ಕುವೈತ್ ಇನ್ನೂ ಹಲ ದೇಶಗಳನ್ನು ಸುತ್ತಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅಲೆಕ್ಸ್ ಅವರ ಜಾದೂ ಕಣಜದಲ್ಲಿ ನೂರಾರು ಬಗೆಯ ಪ್ರದರ್ಶನಗಳಿವೆ. 3ಡಿ ಮ್ಯಾಪಿಂಗ್ ಮ್ಯಾಜಿಕ್ ಶೋ, ಕಣ್ಣು ರೆಪ್ಪೆ ಬಡಿಯದಂತೆ ನಿಬ್ಬೆರರಾಗುವಂತೆ ಮಾಡುವ ಮ್ಯಾಜಿಕ್ ತಂತ್ರಗಳು, ಆರ್ಕೋಬ್ಯಾಟಿಕ್, ಜಗ್ಲಿಂಗ್, ಕಾಮಿಡಿ ಮ್ಯಾಜಿಕ್, ಮೈಕ್ರೋ ಮ್ಯಾಜಿಕ್ ಸೇರಿದಂತೆ ಹಲವಾರು ಮ್ಯಾಜಿಕ್ ಟ್ರಿಕ್ಸ್‌ಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಿದ್ದಾರೆ. ಮನೆ ಮಂದಿ ಸಮೇತ ಹಾಜರಾಗಿ ಎಂಜಾಯ್ ಮಾಡಬಹುದಾದ ಕಾರ್ಯಕ್ರಮವಿದು. ದಿನಕ್ಕೆ ಮೂರು ಪ್ರದರ್ಶಗಳಿರುತ್ತದೆ. ಟಿಕೆಟ್‌ಗಳನ್ನು ಬುಕ್ ಮೈ ಶೋನಲ್ಲಿ ಕಾಯ್ದಿರಿಸಬಹುದು.
ಎಲ್ಲಿ?: ಟೌನ್‌ಹಾಲ್, ಜೆ.ಸಿ. ರಸ್ತೆ
ಯಾವಾಗ?: ಜೂನ್ 9- 10, ಮಧ್ಯಾಹ್ನ 1.30, ಸಂಜೆ 4.30
ಹೆಚ್ಚಿನ ಮಾಹಿತಿಗೆ: 9148446679