Advertisement

ವಿದೇಶಿ ನಾಯಕರು, ಲಾಮಾ ಭೇಟಿ ಅಪರಾಧ: ಚೀನ

07:10 AM Oct 22, 2017 | Harsha Rao |

ಬೀಜಿಂಗ್‌: ಟಿಬೆಟಿಯನ್‌ ಧರ್ಮಗುರು ದಲೈಲಾಮಾ ಅವರನ್ನು ವಿದೇಶಿ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು, ನಾಯಕರು ಭೇಟಿಯಾದರೆ ಅದು ಗಂಭೀರ ಅಪರಾಧ. ಹೀಗೆಂದು ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನ (ಸಿಪಿಸಿ) ಎಚ್ಚರಿಕೆ ನೀಡಿದೆ. ಇಂಥ ಕ್ರಮ ಚೀನ ನಾಗರಿಕರ ಭಾವನೆಗಳಿಗೆ ವಿರುದ್ಧವಾದದನ್ನು ಎಂದು ಅದು ಪ್ರತಿಪಾದಿಸಿದೆ. “ನಮ್ಮ ಪ್ರಕಾರ ದಲೈಲಾಮಾ ದೇಶದ ಜನರ ನೆಮ್ಮದಿಗೆ ಭಂಗ ತರುವ ವ್ಯಕ್ತಿ’ ಎಂದು ಪಕ್ಷಗ ನಾಯಕ ಝಾಂಗ್‌ ಯಿಜಿಯಾಂಗ್‌ ಹೇಳಿದ್ದಾರೆ.

Advertisement

ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು ದಲೈ ಲಾಮಾರನ್ನು ಧಾರ್ಮಿಕ ಮುಖಂಡ ಎಂಬ ಹಿನ್ನೆಲೆಯಲ್ಲಿ ಭೇಟಿ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಚೀನ ದಿಂದ ಟಿಬೆಟ್‌ ಪ್ರತ್ಯೇಕಿಸಲು ದಂಗೆಯೆಬ್ಬಿಸಿದ್ದ ದಲಾಯಿ ಲಾಮಾ ಸದ್ಯದ ಸನ್ನಿವೇಶದಲ್ಲಿ ರಾಜಕೀಯ ಮುಖಂಡ ರಾಗಿದ್ದಾರೆ ಎಂದಿದ್ದಾರೆ ಅವರು. ಭಾರತದ ಹೆಸರನ್ನು ಉಲ್ಲೇಖೀಸದೆ ಹೇಳಿದ ಝಾಂಗ್‌ ಟಿಬೆಟಿಯನ್‌ ನಾಯಕ 1959ರಲ್ಲಿ ದಂಗೆ ವಿಫ‌ಲವಾದ ನಂತರ ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದರು ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next