Advertisement

ಕೊನೇ ಕ್ಷಣದಲ್ಲಿ ಎಲ್‌ಐಸಿ ಐಪಿಒಗೆ ಮುಗಿಬಿದ್ದ ವಿದೇಶಿ ಹೂಡಿಕೆದಾರರು!

12:34 AM May 11, 2022 | Team Udayavani |

ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆ ಅನಿಶ್ಚಿತತೆ, ಕರೆನ್ಸಿ ರಿಸ್ಕ್ ಗೆ ಹೆದರಿ ಎಲ್‌ಐಸಿ ಐಪಿಒದಿಂದ ದೂರ ಉಳಿದಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು, ಇನ್ನೇನು ಬಿಡ್ಡಿಂಗ್‌ ಪ್ರಕ್ರಿಯೆ ಮುಗಿ ಯಲು ಒಂದೆರಡು ಗಂಟೆಗಳು ಬಾಕಿಯಿರು ವಂತೆ ಏಕಾಏಕಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

Advertisement

ಒಟ್ಟಾರೆ 16.20 ಕೋಟಿ ಷೇರುಗಳ ಪೈಕಿ ಶೇ.60ರಷ್ಟನ್ನು ಸಾಗರೋತ್ತರ ಹೂಡಿಕೆ ದಾರರಿಗೆಂದೇ ಮೀಸಲಿಡಲಾಗಿತ್ತು. ಜಾಗತಿಕ ಆರ್ಥಿಕ ಸ್ಥಿತಿ ಡೋಲಾಯ ಮಾನವಾಗಿರುವ ಕಾರಣ ಆರಂಭದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಿಡ್ಡಿಂಗ್‌ನಲ್ಲಿ ಆಸಕ್ತಿ ತೋರಿರಲಿಲ್ಲ. ಆದರೆ ಪ್ರಕ್ರಿಯೆಯ ಕೊನೆಯ ದಿನವಾದ ಸೋಮವಾರ ಏಕಾಏಕಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದು, ನಿಗದಿಗಿಂತ 3 ಪಟ್ಟು ಅಧಿಕ ಬಿಡ್ಡಿಂಗ್‌ ನಡೆದಿದೆ ಎಂದು ಷೇರುಮಾರುಕಟ್ಟೆಯ ದತ್ತಾಂಶ ತಿಳಿಸಿದೆ.

ವಿಶೇಷವೆಂದರೆ ದೇಶೀಯ ರಿಟೇಲ್‌ ಖರೀದಿ ದಾರರು, ಪಾಲಿಸಿದಾರರು ಹಾಗೂ ಉದ್ಯೋಗಿಗಳು ಬಿಡ್ಡಿಂಗ್‌ ಆರಂಭವಾದಾಗಿ ನಿಂದಲೂ ಬಹಳ ಆಸಕ್ತಿಯಿಂದ ಭಾಗವಹಿಸಿ ದ್ದಾರೆ. ಎಲ್ಲ ವಿಭಾಗಗಳಲ್ಲೂ ನಿರೀಕ್ಷೆ ಮೀರಿ ಬಿಡ್ಡಿಂಗ್‌ ಆಗಿವೆ.

ಈ ಹಿನ್ನೆಲೆಯಲ್ಲಿ ಇದನ್ನು ಭಾರತದ “ಅರಾಮ್ಕೊ ಮೊಮೆಂಟ್‌’ ಎಂದು ಬಣ್ಣಿಸಲಾಗಿದೆ. 2019ರಲ್ಲಿ ಗಲ್ಫ್ ತೈಲ ದಿಗ್ಗಜ ಸೌದಿ ಅರೇಬಿಯಾದ ಅರಾಮ್ಕೊ ಐಪಿಒ ಬಿಡು ಗಡೆ ಯಾದಾಗಲೂ (29.4 ಶತಕೋಟಿ ಡಾಲರ್‌) ವಿದೇಶಿಯರಿಗಿಂತ ಹೆಚ್ಚು ಆಸಕ್ತಿಯಿಂದ ದೇಶೀಯ ಹೂಡಿಕೆದಾರರೇ ಬಿಡ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next