Advertisement

ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯ

03:13 PM Aug 07, 2022 | Team Udayavani |

ಬೈಲಹೊಂಗಲ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಡಿವೈಎಸ್ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಅಸಮಾಧಾನ ಹೊರ ಹಾಕಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಪೊಲೀಸರು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವುದು ಬಿಟ್ಟು ಜೆಡಿಎಸ್‌ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಅಪರಾಧ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡಲು ಅವರು ಶ್ರಮಿಸಬೇಕು. ಕಾರ್ಯಕರ್ತರ ಮೇಲೆ ಹಾಕಿದ ಸುಳ್ಳು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ವಕ್ತಾರ ಸಣಗೌಡ ಸಂಗನಗೌಡರ, ಜಿಲ್ಲಾ ಯುವ ಅಧ್ಯಕ್ಷ ಸುನೀಲ ವೆರ್ಣೆಕರ, ತಾಲೂಕು ಅಧ್ಯಕ್ಷ ಎಸ್‌.ವಿ. ಪಾಟೀಲ, ನಿಂಗಪ್ಪ ಕಂಬಳಿ, ಫಕೀರ ಕಡಕೋಳ, ಪುಂಡಲೀಕ ಸಾಣಿಕೊಪ್ಪ, ನಾಗಪ್ಪ ಸವದತ್ತಿ, ಬಸು ವಣ್ಣೂರ, ಸುನೀಲ ಮೇಟಿ, ಆನಂದ ಕಾಜಗಾರ, ಸಂತೋಷ ಪಶುಪತಿಮಠ ಇತರರಿದ್ದರು.

ಕಾನೂನು ಮೀರಿದರೆ ಕ್ರಮ: ಡಿವೈಎಸ್ಪಿ ಕಟಗಿ

Advertisement

ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರೂ ಹೆಚ್ಚು ಕಡಿಮೆ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ವಿನಾಕಾರಣ ದಾಂಧಲೆ ಮಾಡಿ ಅಮಾಯಕರ ಮೇಲೆ ಹಲ್ಲೆ ಮಾಡಿದರೆ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ. ಕಾನೂನು ಮೀರಿ ಯಾರೇ ನಡೆದುಕೊಂಡರೂ ಅಂಥವರ ವಿರುದ್ಧ ಕ್ರಮ ವಹಿಸಲಾಗುವುದು. ಒಂದು ಪಕ್ಷದ ಕಾರ್ಯಕರ್ತರು ಎಂದೆನಿಸಿಕೊಳ್ಳುವ ಕೆಲ ಯುವಕರು ಮದ್ಯದ ಅಮಲಿನಲ್ಲಿ ಬಾರ್‌ -ರೆಸ್ಟೋರೆಂಟ್‌ನಲ್ಲಿ ಗಲಾಟೆ ಮಾಡಿದ್ದಲ್ಲದೇ ಮಾಲೀಕ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಸತ್ಯ ಘಟನೆ. ಆ ವ್ಯಕ್ತಿಗಳು ಅಪರಾಧ ಹಿನ್ನೆಲೆಯಳ್ಳವರಾಗಿದ್ದಾರೆ. ಹೀಗಾಗಿ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್ಪಿ ಶಿವಾನಂದ ಕಟಗಿ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next