Advertisement

Malayalam ಚಿತ್ರರಂಗ; ಆ ದೃಶ್ಯಗಳನ್ನು ನೋಡುವಂತೆ ಬಲವಂತ: ನಟಿಯ ಆರೋಪ

08:41 PM Sep 29, 2024 | Team Udayavani |

ತಿರುವನಂತಪುರಂ : ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪ ಸರಣಿ ಮುಂದುವರಿದಿದ್ದು, ಮಾಜಿ ನಟಿ ಮಿನು ಮುನೀರ್ ಅವರು ನಿರ್ದೇಶಕ-ನಟ ಬಾಲಚಂದ್ರ ಮೆನನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2007 ರಲ್ಲಿ ಗ್ರೂಪ್ ಸೆ*ಕ್ಸ್ ಗೆ ಸಾಕ್ಷಿಯಾಗುವಂತೆ ಒತ್ತಾಯಿಸಿದರು ಎಂದು ಆರೋಪಿಸಿದ್ದಾರೆ.

Advertisement

ಗ್ರೂಪ್ ಸೆ*ಕ್ಸ್ ನೋಡಲು ಒತ್ತಾಯ!!
ಮಾಧ್ಯಮ ಸಂದರ್ಶನವೊಂದರಲ್ಲಿ, ಮೀನು ಮುನೀರ್ ಅವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಹೇಮಾ ಸಮಿತಿಯ ವರದಿಯ ಪ್ರಭಾವದಿಂದ ಮಾತನಾಡುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು. ಬಾಲಚಂದ್ರ ಮೆನನ್ ತನ್ನ ಕೋಣೆಯಲ್ಲಿ ಗುಂಪು ಲೈಂಗಿಕತೆಯನ್ನು ವೀಕ್ಷಿಸಲು ಒತ್ತಾಯಿಸಿದ್ದರು. ಅದನ್ನು ಕೆಲವು ಪುರುಷರು ಕುಳಿತು ನೋಡುತ್ತಿದ್ದರು. ಕೋಣೆಯಲ್ಲಿ ಮೂವರು ಹುಡುಗಿಯರು ಮತ್ತು ಅವರೆಲ್ಲ ತೊಡಗಿದ್ದರು. ನಾನು ಕೋಣೆಯಿಂದ ಹೊರನಡೆದೆ. ಅವರು ನನ್ನನ್ನು ಕುಳಿತು ನೋಡುವಂತೆ ಒತ್ತಾಯಿಸಿದರು” ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಮಿನು ಮುನೀರ್ ಅವರು ನಟ ಜಯಸೂರ್ಯ ಸೇರಿದಂತೆ ಏಳು ಮಂದಿಯ ವಿರುದ್ಧ ದೈಹಿಕ ಮತ್ತು ಮೌಖಿಕ ದೌರ್ಜನ್ಯ ಆರೋಪ ಮಾಡಿದ್ದರು. ಆರೋಪಗಳು ಬೆಳಕಿಗೆ ಬಂದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next