ನವದೆಹಲಿ: ಹಳ್ಳಿಯಲ್ಲಿ ನೆಟ್ ವರ್ಕ್ ಸಮಸ್ಯೆಯಿದ್ದರಿಂದ ಸುಮಾರು 200 ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಪ್ರತಿದಿನ 50 ಕಿಲೋಮೀಟರ್ ನಡೆದು ಹೋಗುತ್ತಿದ್ದ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆಯುತ್ತಿದೆ.
ಕೋವಿಡ್ ಲಾಕ್ ಡೌನ್ ಕಾರಣದಿಂದ ಹಾಗೂ ನಿಸರ್ಗಾ ಚಂಡಮಾರುಗಳಿಂದ ಈ ಗ್ರಾಮ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತು. ಮಾತ್ರವಲ್ಲದೆ ಇಂಟರ್ನೆಟ್ ಸಂಪರ್ಕವೂ ಕಡಿತಗೊಂಡಿತ್ತು, ಇದರಿಂದ ಮಕ್ಕಳಿಗೆ ಅನ್ ಲೈನ್ ತರಗತಿಗಗಳಿಗೆ ಹಾಜರಾಗಲು ತೊಡಕಾಗಿತ್ತು. ಈ ಕಾರಣದಿಂದ ಮಕ್ಕಳು ಪಕ್ಕದ ಗ್ರಾಮಕ್ಕೆ ನಡೆದುಕೊಂಡು ಹೋಗಿ ತರಗತಿಗಳಿಗೆ ಹಾಜರಾಗುತ್ತಿದ್ದರು.
ಆದರೇ ಒಂದು ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸದಿದ್ದರಿಂದ, ಬೆಸೆತ್ತ ವಿದ್ಯಾರ್ಥಿಗಳು ಸಹಾಯಕ್ಕಾಗಿ ಮಕ್ಕಳ ಹಕ್ಕುಗಳ ಆಯೋಗದ ಕದ ತಟ್ಟಿದ್ದಾರೆ. ದೂರು ಆಲಿಸಿದ ರಾಷ್ಟ್ರೀಯ ಮಕ್ಕಳ ಆಯೋಗ ಶೀಘ್ರದಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದೆ. ಮಾತ್ರವಲ್ಲದೆ ನೆಟ್ವರ್ಕ್ ಕಂಪೆನಿಗಳೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದೆ.
ಜೂನ್ 3 ರಂದು ನಿಸರ್ಗ ಚಂಡಮಾರುತ ಈ ಗ್ರಾಮಕ್ಕೆ ಅಪ್ಪಳಿಸಿದ್ದರಿಂದ ನೆಟ್ವರ್ಕ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಅಂದಿನಿಂದ ಈ ಗ್ರಾಮದವರಾರೂ ಮೊಬೈಲ್ ಮತ್ತು ಡೇಟಾ ಸಂಪರ್ಕವನ್ನು ಹೊಂದಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಹೊಡೆತ ಬಿದ್ದಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿಸುವಂತೆ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.