Advertisement

ಶಹಾಬಾದನ್ನು ಹೊಸ ತಾಲೂಕನ್ನಾಗಿ ಘೋಷಿಸಲು ಒತ್ತಾಯ

12:54 PM Feb 04, 2017 | Team Udayavani |

ಶಹಾಬಾದ: ನಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಶಹಾಬಾದ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದ ಅಂಬೇಡ್ಕರ್‌ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು ಹಿಂದಿನ ಸರಕಾರ ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು.

Advertisement

ಈಗಿನ ಕಾಂಗ್ರೆಸ್‌  ಸರಕಾರ 43 ಹೊಸ ತಾಲೂಕು ಘೋಷಣೆ ತಡೆಹಿಡಿದಿದ್ದು, ಕೂಡಲೇ ಎಲ್ಲಾ ಹೊಸ ತಾಲೂಕಗಳನ್ನು ಘೋಷಿಸಬೇಕೆಂದು ಒತ್ತಾಯಿಸಿದರು.  ಘೋಷಿತ ಹೊಸ 43 ತಾಲೂಕಾಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ಸರಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ತಾಲೂಕುಗಳನ್ನು ಕೈಬಿಡಬಾರದು. ಬಿಟ್ಟರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

ಘೋಷಣೆ ಆಗುವವರೆಗೆ ನಗರದಲ್ಲಿರುವ ಉಪ ತಹಶೀಲ್ದಾರ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಿ, ಪೂರ್ಣ ಪ್ರಮಾಣದ ತಹಶೀಲ್ದಾರ ಕಚೇರಿ ಪ್ರಾರಂಭಿಸಬೇಕು. ನಗರ ಹಾಗೂ ಸುತ್ತಲಿನ ಶಿಕ್ಷಕರ ಅನುಕೂಲಕ್ಕಾಗಿ ಕ್ಷೇತ್ರ ಶಿಕ್ಷಣಾಧಿಧಿಕಾರಿಗಳ ಕಚೇರಿ ಪ್ರಾರಂಭಿಸಬೇಕು. ಉಪ ನೋಂದಣಿ ಕಚೇರಿ ಪ್ರಾರಂಭಿಸಬೇಕೆಂದು ಆಗ್ರಹಿಸಲಾಯಿತು.

ನಂತರ ಉಪತಹಶೀಲ್ದಾರ ಮಲ್ಲಿಕಾರ್ಜುನ  ಶಿವಪುರೆ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಿದರು. 

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಇನಾಯತಖಾನ್‌ ಜಮಾದಾರ, ಲೋಹಿತ್‌ ಕಟ್ಟಿ, ಕನಕಪ್ಪ ದಂಡಗುಲಕರ್‌, ಕೃಷ್ಣಪ್ಪ ಕರಣಿಕ್‌, ಅಣೆಪ್ಪ ಇಂಗಿನಶೆಟ್ಟಿ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಶರಣು ವಸ್ತ್ರದ, ರಾಮು ಕಸಾಳೆ, ನಿಂಗಣ್ಣ ಹುಳಗೋಳಕರ್‌, ಗಿರೀಶ ಕಂಬಾನೂರ, ಬಸವರಾಜ ಮದ್ರಿಕಿ, ಶಿವುಗೌಡ, ಅರುಣ ಪಟ್ಟಣಕರ್‌, ಶರಣು ಪಗಲಾಪೂರ, ಸಾಯಿಬಣ್ಣ ಬೆಳಗುಂಪಿ, ಹಣಮಂತ ತರನಳ್ಳಿ ಇದ್ದರು.

Advertisement

ಬಿಜೆಪಿ ವತಿಯಿಂದ: ನಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶಾಸ್ತ್ರೀ ವೃತ್ತದಿಂದ ಉಪತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆಗೆ ಮನವಿ ಪತ್ರ ಸಲ್ಲಿಸಿದರು.  

ನಂತರ ಮಾತನಾಡಿದ ಪ್ರತಿಭಟನಾಕಾರರು ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್‌ ಸರಕಾರ ಘೋಷಣೆ ಮಾಡಿದ ಹೊಸ ತಾಲೂಕುಗಳ ಘೋಷಣೆ ತಡೆಹಿಡಿದಿದ್ದಾರೆ. ಅಲ್ಲದೇ ಕೆಲವು ತಾಲೂಕು ರಚನೆಯನ್ನು ಕೈಬಿಡುತ್ತಿದ್ದಾರೆ ಎನ್ನುವ ವದಂತಿ ಹರಡುತ್ತಿದೆ. ಕೂಡಲೇ ಹಿಂದೇಟು ಹಾಕದೇ ಎಲ್ಲ ಹೊಸ ತಾಲೂಕಗಳನ್ನು ಘೋಷಿಸಬೇಕೆಂದು ಒತ್ತಾಯಿಸಿದರು. 

ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಅರುಣ ಪಟ್ಟಣಕರ್‌, ಸೂರ್ಯಕಾಂತ ವಾರದ, ಬಸವರಾಜ ಮದ್ರಿಕಿ, ವಿರೇಶ ಬಂದೆಳ್ಳಿ, ಡಾ| ಅಶೋಕ ಜಿಂಗಾಡೆ, ರಾಮು ಕುಸಾಳೆ, ರಾಜು ದಂಡಗುಲಕರ್‌, ಪ್ರಕಾಶ ಮೇಲಗಿರಿ,ಬಸವರಾಜ ಬಿರಾದಾರ, ಶರಣು ವಸ್ತ್ರದ, ಅಣೆಪ್ಪ ಇಂಗಿನಶೆಟ್ಟಿ, ರಾಜು ಮಾನೆ, ಶಶಿಕಲಾ ಸಜ್ಜನ್‌, ಪಾರ್ವತಿ, ಎಸ್‌. ಕೋರೆ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next