Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ 2009 ಏಪ್ರಿಲ್ 1ರಿಂದ 2019 ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ರೈತರು ಪಡೆದಿದ್ದ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, 2008ರಲ್ಲಿ ಯುಪಿಎ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿದ್ದರೂ, ವಿಧಿಸಿದ್ದ ಷರತ್ತುಗಳಿಂದ ಸಾವಿರಾರು ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದರು. ಹೀಗಾಗಿ ಸಾಲಮನ್ನಾವನ್ನು 2009ಕ್ಕೂ ಹಿಂದಿನ ವರ್ಷಗಳಿಗೆ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು.
Related Articles
Advertisement
ಈಗಾಗಲೇ ರಾಜ್ಯದ 175 ರೈತ ಸಂಘಟನೆಗಳ ಒಕ್ಕೂಟದಿಂದ ಗ್ರಾಮ ಬಂದ್ ಚಳವಳಿಯನ್ನು ಮಾಡಲಾಗಿದೆ.ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಲು, ತರಕಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದ ನಗರ ಜೀವನದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಸಹ ಗ್ರಾಮಬಂದ್ ಚಳವಳಿ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಗೋಣಿಬಸಪ್ಪ, ರಾಜ್ಯ ಕಾರ್ಯಾಧ್ಯಕ್ಷ ಎ.ವೀರಸಂಗಯ್ಯ, ಎಂ.ಎಲ್.ಕೆ.ನಾಯಡು, ಕೃಷ್ಣಪ್ಪ, ದೇವರಮನಿ ಮಹೇಶ್, ವಿರೂಪಾಕ್ಷಪ್ಪ, ಜೆ.ನಾಗರಾಜ್, ವಿ.ನಾಗರಾಜ್, ಬಿ.ಸಿದ್ದನಗೌಡ, ಬಿ.ಉಜ್ಜಿನಯ್ಯ, ಎಸ್ .ಬಾಷಾಸಾಬ್, ಕೆ.ಡಿ.ನಾಯ್ಕ, ರಾಘವೇಂದ್ರ ರೆಡ್ಡಿ, ಮಲ್ಲಿಕಾರ್ಜುನ ಸೇರಿದಂತೆ ಹಲವಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.