Advertisement

ಪಾಕ್‌ 7 ಸಂಸ್ಥೆಗಳಿಗೆ ನಿಷೇಧ

07:30 AM Mar 27, 2018 | |

ಇಸ್ಲಾಮಾಬಾದ್‌/ವಾಷಿಂಗ್ಟನ್‌: ಭಾರತವನ್ನು ಹಿಂದಿಕ್ಕಿ ಪರಮಾಣು ಇಂಧನ ಪೂರೈಕೆ ರಾಷ್ಟ್ರಗಳ ಸದಸ್ಯತ್ವ (ಎನ್‌ಎಸ್‌ಜಿ) ಪಡೆಯಬೇಕೆಂಬ ಪಾಕಿಸ್ತಾನದ ಒತ್ತಾಸೆಗೆ ಪ್ರಬಲ ಹಿನ್ನಡೆಯಾಗಿದೆ. ಆ ರಾಷ್ಟ್ರದ ಏಳು  ಪರಮಾಣು ಸಂಶೋಧನಾ ಸಂಸ್ಥೆಗಳಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿದೆ. ಅವುಗಳು ಅಮೆರಿಕದ ರಾಷ್ಟ್ರೀಯ ಮತ್ತು ವಿದೇಶಾಂಗ ಇಲಾಖೆಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಅಮೆರಿಕದ ಕೈಗಾರಿಕೆ ಮತ್ತು ಭದ್ರತಾ ಸಂಸ್ಥೆ (ಬಿಐಎಸ್‌) ಕಳೆದ ವಾರ ಪ್ರಕಟಿಸಿದ ವರದಿಯಲ್ಲಿ ಆರೋಪಿಸಿದೆ. ಪಾಕಿಸ್ತಾನ ಮಾತ್ರವಲ್ಲದೆ ದಕ್ಷಿಣ ಸುಡಾನ್‌ನ 15 ಮತ್ತು ಸಿಂಗಾಪುರದ 1 ಸಂಸ್ಥೆ ಮೇಲೆ ನಿಷೇಧ ಹೇರಲಾಗಿದೆ.

Advertisement

ನಿಷೇಧ ಹೇರಲಾಗಿರುವ ಸಂಸ್ಥೆಗಳು ಸುರಕ್ಷಿತವಲ್ಲದ ಪರಮಾಣು ಚಟುವಟಿಕೆ ಮತ್ತು ನಿಷೇಧಕ್ಕೆ ಒಳಗಾಗಿರುವ ರಾಷ್ಟ್ರಗಳ ಜತೆ ವಹಿವಾಟು ನಡೆಸಿವೆ ಎಂದು ಅಮೆರಿಕದ ಸಂಸ್ಥೆ ಪ್ರತಿಪಾದಿಸಿದೆ. ಭಾರತ ಈಗಾಗಲೇ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್‌) ಮತ್ತು ವಾಸ್ನೇರ್‌ ಅರೇಂಜ್‌ಮೆಂಟ್‌ (Wassenaar Arrangement) ನ ಸದಸ್ಯ ಪಡೆದುಕೊಂಡಿದೆ. ಗಮನಾರ್ಹ ಅಂಶವೆಂದರೆ ಈ ಎರಡು ಸಂಸ್ಥೆಗಳ ಸದಸ್ಯತ್ವ ಪಡೆದುಕೊಂಡರೆ, ಎನ್‌ಎಸ್‌ಜಿ ಪ್ರವೇಶ ಸುಲಭವಾಗಿಯೇ ಸಿಗಲಿದೆ. ಚೀನಾ ತಗಾದೆ ಎತ್ತಿರುವುದರಿಂದ ಅದು ಸದ್ಯಕ್ಕೆ  ತಡೆಹಿಡಿ ಯಲ್ಪಟ್ಟಿದೆ. ಜತೆಗೆ, ಭಾರತಕ್ಕೆ ಹಲವು ರಾಷ್ಟ್ರಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. 2016ರ ಮೇ 19ರಂದು ಪಾಕಿಸ್ತಾನ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next