ನವ ದೆಹಲಿ: “2022ರ ಇಡೀ ವರ್ಷ ಜಗತ್ತಿನಲ್ಲಿ ಡೆಲ್ಟಾ ತಳಿ ಅವಾಂತರ ಸೃಷ್ಟಿಸುವ ಸಾಧ್ಯತೆ ಇದೆ’ ಎಂದು ಮೈಕ್ರೋ ಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.
“ಮುಂದಿನ ಸಾಂಕ್ರಮಿಕ ದಾಳಿ ಎದುರಿಸಲು ನಾವೆಲ್ಲರೂ ಸಿದ್ಧರಾಗಬೇಕು. ಎಂಆರ್ ಎನ್‌ಎ ವಿಧಾನ ಮೂಲಕ ಜರ್ಮನ್ ಸಂಸ್ಥೆಯ ಜತೆಗೂಡಿ ಕಡಿಮೆ ದರದಲ್ಲಿ ಜ್ವರದ ಲಸಿಕೆ ಶೋಧಿಸುವ ಕಾರ್ಯಕ್ಕೆ ನಮ್ಮ ಫೌಂಡೇಶನ್ ಕೈಜೋಡಿಸಿದೆ.
ಭಾರತದಲ್ಲೂ ಸಾಕಷ್ಟು ಕೇಂದ್ರಗಳನ್ನು ತೆರೆಯುವ ಯೋಜನೆಯಿದೆ’ ಎಂದು ತಿಳಿಸಿದ್ದಾರೆ. “2021ರಲ್ಲಿಯೇ ಕೊರೊನಾ ನಿರ್ಮೂಲನೆ ಆಗುತ್ತದೆ ಎಂದು ಕೊಂಡಿದ್ದೆವು. ಯಾರೂ ನಿರೀಕ್ಷಿಸದ ಡೆಲ್ಟಾ ತಳಿ ಬಂದು ಎಲ್ಲರ ಲೆಕ್ಕಾಚಾರವನ್ನೂ ಬುಡಮೇಲು ಮಾಡಿದೆ’ ಎಂದು “ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಲಸಿಕೆ ಉತ್ಪಾದನೆಗಾಗಿ ಬಿಲ್‌ಗೇಟ್ಸ್ ಫೌಂಡೇಶನ್, ಸೀರಮ್ ಇನ್‌ಸ್ಟಿಟ್ಯೂಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, 300 ಮಿಲಿಯನ್ ಡಾಲರ್‌ಗೂ ಅಧಿಕ ನೆರವು ನೀಡಿದೆ.
ಇದನ್ನೂ ಓದಿ :ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ