Advertisement

2021ರ ಗಣತಿಯಲ್ಲಿ ಒಬಿಸಿ ಮಾಹಿತಿ ಸಂಗ್ರಹ

06:00 AM Sep 01, 2018 | |

ನವದೆಹಲಿ: ಇದೇ ಮೊದಲ ಬಾರಿಗೆ ಇತರೆ ಹಿಂದುಳಿದ ಜಾತಿ (ಒಬಿಸಿ)ಗಳ ಗಣತಿಯನ್ನು 2021ರ ಜನಗಣತಿಯಲ್ಲಿ ನಡೆಸಲಾಗುತ್ತದೆ ಎಂದು  ಕೇಂದ್ರ ಗೃಹ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ. 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವು ಮಹತ್ವ ಪಡೆದಿದೆ. ಹಲವು ಒಬಿಸಿ ಸಮುದಾಯಗಳು ದೀರ್ಘ‌ಕಾಲದಿಂದ ಇಂಥದ್ದೊಂದು ಬೇಡಿಕೆ ಇಡುತ್ತಲೇ ಬಂದಿವೆ.

Advertisement

ಈ ಕುರಿತು ಮಾಹಿತಿ ನೀಡಿರುವ ಗೃಹ ಇಲಾಖೆ ವಕ್ತಾರರು, ಮುಂದಿನ ಜನಗಣತಿಯ ಬಗ್ಗೆ ಮೂರು ವರ್ಷಗಳಲ್ಲಿ ರೂಪುರೇಷೆಗಳನ್ನು ಅಂತಿಮ ಪಡಿಸಲಾಗುತ್ತದೆ. ಜತೆಗೆ ಮಾಹಿತಿ ಸಂಗ್ರಹಿಸಿ ಕ್ಷಿಪ್ರವಾಗಿ ಅದನ್ನು ಕ್ರೋಡೀಕರಿಸುವ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದಿದ್ದಾರೆ. 1931ರ ಗಣತಿ ಆಧರಿಸಿ ಮಂಡಲ್‌ ಆಯೋಗ ನೀಡಿದ್ದ ಶಿಫಾರಸಿನಲ್ಲಿ ಒಬಿಸಿಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ವಿ.ಪಿ.ಸಿಂಗ್‌ ಸರ್ಕಾರ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next