Advertisement
ನಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ವಸಡಿನ ಬಣ್ಣವು ಇದ್ದಲ್ಲಿ, ವಸಡಿನ ಚಂದವೇ ಬೇರೆ. ಬಿಳಿ ಚರ್ಮದವರಲ್ಲಿ ವಸಡಿನ ಬಣ್ಣ ತೆಳು ಗುಲಾಬಿ (PINK) ಬಣ್ಣದ್ದಾಗಿರುವುದು. ಆದರೆ ಇಂತಹ ಬಣ್ಣ ಪಾಶ್ಚಾತ್ಯರಲ್ಲಿ ಇರುವುದು ಸಾಮಾನ್ಯ. ಭಾರತೀಯರಲ್ಲಿ, ಸಾಮಾನ್ಯವಾಗಿ ಚರ್ಮದ ಬಣ್ಣ ಗೋಧಿ/ಕಪ್ಪು ಇರುವುದು, ಇದಕ್ಕೆ ಅನುಗುಣವಾಗಿ, ವಸಡಿನ ಬಣ್ಣ , ಕಪ್ಪು / ಕಂದು ಬಣ್ಣದಿರುವುದು. ಚರ್ಮದ ಬಣ್ಣ ಕಪ್ಪು ಇದ್ದಲ್ಲಿ , ವಸಡಿನ ಬಣ್ಣ ಕಂದು/ಕಪ್ಪು ಇದ್ದಲ್ಲಿ , ಹೊಂದಾಣಿಕೆಯಿಂದ, ಮುಖದ ಅಂದ ಒಪ್ಪುವಂತಿರುತ್ತದೆ. ಅದೇ, ಕೆಲವರಲ್ಲಿ ಚರ್ಮದ ಬಣ್ಣ ಗೋಧಿ ಬಣ್ಣವಿದ್ದು ವಸಡಿನ ಬಣ್ಣ ಕಪ್ಪು / ಕಂದು ಇದ್ದಲ್ಲಿ , ನಗಾಡುವಾಗ, ಅಥವಾ ಮಾತನಾಡುವಾಗ, ವಸಡಿನ ಬಣ್ಣ ಎದ್ದು ಕಂಡು, ಮುಖದ ಸೌಂದರ್ಯ ಒಪ್ಪುವಂತಿರದೇ ಇರಬಹುದು. ಇದರಿಂದಾಗಿ ಕೆಲವರು ಕೃತಕ ನಗುವಿನಿಂದ, ಕೃತಕವಾಗಿರುತ್ತಾರೆ. ಮುಖದ ಸೌಂದರ್ಯ ಚಿಕಿತ್ಸೆಯಲ್ಲಿ, ವಸಡಿನ ಅಂದ ಚಿಕಿತ್ಸೆಯು ಒಂದು ಭಾಗ ಎನ್ನುವುದು, ತುಂಬಾ ಜನರಿಗೆ ಇನ್ನೂ ತಿಳಿಯದು. ಇದಕ್ಕೆ ಚಿಕಿತ್ಸೆಯೇನು? ಇದಕ್ಕೆ ಶಾಶ್ವತ ಪರಿಹಾರವಿದೆಯೇ? ಎಂದು ನೋಡೋಣ.
Related Articles
Advertisement
“”ಈ ಮೆಲಾನಿನ್ ಸ್ರವಿಸುವ ಜೀವಕೋಶಗಳು ನಮ್ಮ ವಸಡಿನ ಮೇಲ್ಪದರದಲ್ಲಿರುವುದರಿಂದ, ಈ ಪದರವನ್ನು ಬೇರೆ ಬೇರೆ ವಿಧಾನಗಳಿಂದ ತೆಗೆಯುವುದರಿಂದ, ವಸಡಿನ ಬಣ್ಣ ಬದಲಾಯಿಸಬಹುದು.
1. ಶಸ್ತ್ರಚಿಕಿತ್ಸೆಯ “”ಬ್ಲೇಡ್” ನಿಂದ ವಸಡಿನ ಮೇಲ್ಪದರವು 0.5mm/0.75mm ದಪ್ಪವಿರುತ್ತದೆ. ಇದನ್ನು ಸಂಪೂರ್ಣವಾಗಿ ತೆಗೆಯಬಹುದು. ಶಸ್ತ್ರ ಚಿಕಿತ್ಸೆಯ “”ಬ್ಲೇಡ್‌ನಿಂದ” ಈ ಪದರವನ್ನು ತೆಗೆಯುವ ಮುನ್ನ. ಆ ಜಾಗಕ್ಕೆ ಅರಿವಳಿಕೆ ಚುಚ್ಚು ಮದ್ದನ್ನು ಕೊಡುತ್ತಾರೆ. ಅದಾದ ನಂತರ “”ಎಷ್ಟು ವಸಡು” ಬಣ್ಣ ಬದಲಾಗಬೇಕೋ, ಅಷ್ಟು ಜಾಗವನ್ನು ಗುರುತಿಸಿ, ಜಾಗದ ಒಂದು ತುದಿಯಿಂದ, ಇನ್ನೊಂದು ತುದಿಯವರೆಗೆ, ಬ್ಲೇಡ್‌ನಿಂದ ಖಾಲಿ ವಸಡಿನ ಮೇಲ್ಪದರವನ್ನು ವಿಂಗಡಿಸಿ, ರಕ್ತ ಒಸರುವುದನ್ನು ತಡೆಗಟ್ಟಿ , ಈ ಶಸ್ತ್ರ ಚಿಕಿತ್ಸೆಯ ಜಾಗವನ್ನು, ಶೀಘ್ರ ಗುಣವಾಗಲು, ವಸಡನ್ನು ರಕ್ಷಿಸುವ ತಾತ್ಕಾಲಿಕ ಪದರವನ್ನು ((PACK) ಹಾಕುತ್ತಾರೆ. ಈ ತಾತ್ಕಾಲಿಕ ಪದರದಿಂದ, ವಸಡಿನ ರಕ್ತನಾಳಗಳ ರಕ್ಷಣೆ, ರಕ್ತ ಒಸರುವುದು ಕಡಿಮೆಯಾಗುವುದು, ಊಟ ಮಾಡುವಾಗ, ತಿನ್ನುವಾಗ, ಈ ಜಾಗಕ್ಕೆ ತೊಂದರೆಯಾಗದೇ, ಹಾಗೇ ಇರುವುದು, ಒಂದು ವಾರ 10 ದಿನಗಳ ನಂತರ ಈ ಪದರವನ್ನು ತೆಗೆದರೆ, ವಸಡಿನ ಬಣ್ಣ ಬದಲಾವಣೆಯಾಗುವುದು ಗೋಚರಿಸುವುದು. ಒಂದು ತಿಂಗಳಲ್ಲಿ ಇದರ ಪರಿಣಾಮ ಸರಿಯಾಗಿ ಕಾಣುವುದು. ಅಲ್ಲಲ್ಲಿ ಮತ್ತೆ ಚುಕ್ಕೆ ಕಂಡಲ್ಲಿ ಅದನ್ನು ಚಿಕ್ಕ ಶಸ್ತ್ರ ಚಿಕಿತ್ಸೆಯಿಂದ ಅಲ್ಲಲ್ಲೇ ಸರಿಪಡಿಸಬಹುದು. ಈ ವಿಧಾನದ ತೊಂದರೆಯೆಂದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ವಲ್ಪ ರಕ್ತ ಒಸರುವುದು ಮತ್ತು ಶಸ್ತ್ರಚಿಕಿತ್ಸೆಯ ಅನಂತರ ಇರುವ ನೋವು.
ಎರಡನೆಯ ವಿಧಾನ, ಮೇಲೆ ಹೇಳಿದ ಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆಯ ಬ್ಲೇಡಿನ ಬದಲಾಗಿ, ಹಲ್ಲು ಹುಳುಕು ತೆಗೆಯಲು ಉಪಯೋಗಿಸುವ ಸಾಧನವಾದ “”ಬರ್” (ಆಖೀR) ನ್ನು ಉಪಯೋಗಿಸಿ ತೆಗೆಯಬಹುದು. ಈ ವಿಧಾನವು ಮೇಲೆ ಹೇಳಿದ “”ಬ್ಲೇಡ್”ನ ತರಹವೇ ಆದರೂ, ನಿಕಟವಾಗಿ ಇಷ್ಟೇ ಮೇಲ್ಪದರವನ್ನು ತೆಗೆಯಲಾಗಿದೆ ಎಂದು ಹೇಳಲಾಗುವುದಿಲ್ಲ ಇದರಿಂದಾಗಿ ಎಷ್ಟು “”ಮೆಲಾನಿನ್” ಸ್ರವಿಸುವ ಜೀವಕೋಶಗಳನ್ನು ತೆಗೆದಿದ್ದೇವೆ ಎಂದು ಹೇಳಲಾಗದೇ, ಅಲ್ಲಲ್ಲಿ “ವಸಡು ಕಲೆ’ಗಳು, ಉಳಿಯಬಹುದು ಮತ್ತು ಮತ್ತೆ ಪುನಃ ಚಿಕಿತ್ಸೆ ಮಾಡುವ ಆವಶ್ಯಕತೆಯೂ ಬೀಳಬಹುದು.3ನೆಯ ವಿಧಾನ, ಕ್ರಯೋಸರ್ಜರಿ – ವಸಡಿನ ಮೇಲಿನ ಪದರವನ್ನು ಶೀತಲೀಕರಿಸಿ, ವಸಡಿನ ಮೇಲಿನ ಪದರವನ್ನು ಅರಿವಳಿಕೆ ಸಹಾಯವಿಲ್ಲದೇ, ಅಥವಾ ಅತೀ ಕಡಿಮೆ ಅರಿವಳಿಕೆಯ ಸಹಾಯದೊಂದಿಗೆ ತೆಗೆಯುವುದು. ಹೀಗೆ ಮಾಡುವುದರಿಂದ ರಕ್ತ ಒಸರುವುದು ಕಡಿಮೆ, ಅಲ್ಲದೇ, ಶಸ್ತ್ರಚಿಕಿತ್ಸೆಯ ಅನಂತರ ನೋವು ಕೂಡ ಕಡಿಮೆ.
4ನೆಯ ವಿಧಾನ ಮತ್ತು ಇತ್ತೀಚೆಗೆ ಬಹು ಚಾಲಿತವಾಗಿರುವ ವಿಧಾನ ಲೇಸರ್ ಚಿಕಿತ್ಸೆ. ಲೇಸರ್ ಸಹಾಯದಿಂದ ಈ ಮೇಲ್ಪದರವನ್ನು ತೆಗೆಯುವ ವಿಧಾನ ಬಹುವಾಗಿ ಚಾಲ್ತಿಯಲ್ಲಿದೆ. ಈ ಚಿಕಿತ್ಸೆಯಿಂದ, ಉಪಯೋಗಗಳು ಜಾಸ್ತಿ ಮತ್ತು ತೊಂದರೆಗಳು ಕಡಿಮೆ. ಅರಿವಳಿಕೆಯ ಅಗತ್ಯವಿಲ್ಲ, ಚುಚ್ಚುವುದು ತಪ್ಪುವುದು, ತುಂಬಾ ಜನರು ದಂತ ವೈದ್ಯರಲ್ಲಿ ಬರಲು ಹೆದರುವುದು, ಈ ಅರಿವಳಿಕೆ ಚುಚ್ಚುಮದ್ದಿನ ಭಯದಿಂದ ಮತ್ತು ರಕ್ತ ಒಸರುವ ತೊಂದರೆಯಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ನೋವಿಲ್ಲ. ಹಾಗೂ ಮೊದಲನೇ ಮತ್ತು ಎರಡನೇ ಚಿಕಿತ್ಸೆಯ ವಿಧಾನದಲ್ಲಿ ಹೇಳಿದ ಪ್ರಕಾರ ಶಸ್ತ್ರ ಚಿಕಿತ್ಸೆಯ ನಂತರ ರಕ್ಷಕ ಕವಚ ಕೊಡುವ ಪ್ರಮೇಯವೂ ಇಲ್ಲ. ಅಲ್ಲದೇ ಈ ಚಿಕಿತ್ಸೆಯ ಅನಂತರ ಮತ್ತೆ ಮತ್ತೆ, ಶಸ್ತ್ರ ಚಿಕಿತ್ಸೆಯ ಅಗತ್ಯವೂ ಕಡಿಮೆ.ಹೀಗೆ ಬೇರೆ ಬೇರೆ ವಿಧಾನಗಳಿಂದ ವಸಡಿನ ಬಣ್ಣವನ್ನು ಕಪ್ಪು/ಕಂದು ಬಣ್ಣದಿಂದ, ತೆಳು ಗುಲಾಬಿ ಬಣ್ಣ ಮಾಡಲು, ಸಾಧ್ಯ. ಇದು ಶಾಶ್ವತ ಪರಿಹಾರವಲ್ಲವಾದರೂ, ಬೇಕಾದಾಗ, ಮುಖದ ಚಂದಕ್ಕೆ ವಸಡಿನ ಅಂದದ ಮೆರುಗನ್ನು ಕೊಡಲು ಸಹಕಾರಿಯಾಗುತ್ತದೆ.