Advertisement
ಕೆಡಿಪಿ ಸದಸ್ಯರಾದ ಕೃಷ್ಣ ಪ್ರಸಾದ್ ಆಳ್ವ, ಅಶೋಕ್ ಸಂಪ್ಯ ವಿಷಯ ಪ್ರಸ್ತಾಪಿಸಿದರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಸಾಲ ಮನ್ನಾ ಪ್ರಯೋಜನ ಪಡೆದ ಫಲಾನುಭವಿಗಳ ವಿವರ ನೀಡುವಂತೆ ಅಧಿಕಾರಿಗೆ ಸೂಚಿಸಿ ಚರ್ಚೆ ನಡೆದು, ನಿರ್ಣಯ ಕೈಗೊಳ್ಳಲಾಯಿತು.
ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯ ನಿಯಮವನ್ನು ದ.ಕ. ಜಿಲ್ಲೆಗೆ ಅನ್ವಯವಾಗುವಂತೆ ಸರಳ ಗೊಳಿಸುವಂತೆ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
Related Articles
Advertisement
ಉತ್ತರಿಸಿದ ಶಾಸಕಿ, ಇಲ್ಲಿ ಗರ್ಭಿಣಿ, ಬಾಣಂತಿಯರನ್ನು ಮನೆಯಿಂದ ಹೊರಗೆ ಕಳಿಸುವುದಿಲ್ಲ. ಮಧ್ಯಾಹ್ನ ಹೊತ್ತು ಒಂಟಿಯಾಗಿ ಹೋಗುವುದು ಕಷ್ಟ. ಹಾಗಾಗಿ ಈ ಜಿಲ್ಲೆಯ ಮಟ್ಟಿಗೆ ನಿಯಮದಲ್ಲಿ ಸರಳಗೊಳಿಸಲು ಸರಕಾರದ ಗಮನ ಸೆಳೆಯೋಣ. ಈ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದು ಸೂಚಿಸಿದರು.
ಪುತ್ತೂರು-ಪಾಣಾಜೆ-ಕಾಸರಗೋಡು ಬಸ್ ಓಡಾಟ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬಸ್ ಸಂಚರಿಸದೇ ಇರುವುದನ್ನು ಶಾಸಕಿ ಪ್ರಶ್ನಿಸಿದರು. ಪುತ್ತೂರು- ಸುಳ್ಯ- ಬಂದ್ಯಡ್ಕ ಮೂಲಕ ಕಾಸರ ಗೋಡಿಗೆ ಬಸ್ ಓಡಾಟ ನಡೆಸುವಂತೆ ಸೂಚಿಸಿದ್ದರೂ 3 ದಿನಗಳಲ್ಲಿ ನಿಂತಿದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ನಗರಕ್ಕೆ ಅವಕಾಶ ನೀಡಿಕುಂಬ್ರದಿಂದ -ದರ್ಬೆ ಹಾಗೂ ಮಾಣಿ ಯಿಂದ ನೆಹರೂನಗರಕ್ಕೆ ಬಸ್ ಪಾಸ್ ಮೂಲಕ ಬರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣಕ್ಕೆ ಬರಲು ಅವಕಾಶ ನೀಡುತ್ತಿಲ್ಲ. ಅಲ್ಲಿಂದ ಹಣ ಕೊಟ್ಟು ಬಸ್ ಹತ್ತಬೇಕು. ಇಂತಹ ನಿಯಮ ಏಕೆ ಎಂದು ಕೃಷ್ಣಪ್ರಸಾದ್ ಆಳ್ವ ಪ್ರಶ್ನಿಸಿದರು. ಇದನ್ನು ಶಾಸಕರು ಪ್ರಶ್ನಿಸಿದರಲ್ಲದೇ ಅವಕಾಶ ನೀಡುವಂತೆ ಸೂಚಿಸಿದರು. ರಾತ್ರಿ ವೇಳೆ ಕೊಳವೆಬಾವಿ?
ಸರಕಾರದ ವತಿಯಿಂದ ತೆಗೆಯುವ ಕೊಳವೆಬಾವಿ ಗಳನ್ನು ಕೆಲವೆಡೆ ರಾತ್ರಿ ವೇಳೆ ಕೊರೆಸಲಾಗುತ್ತಿದೆ. ಹಗಲು ಹೊತ್ತಿನಲ್ಲಿ ಬೋರ್‌ವೆಲ್ ಗಾಡಿ ಯಾಕೆ ಬರುತ್ತಿಲ್ಲ ಎಂದು ಅನಿತಾ ಹೇಮನಾಥ ಶೆಟ್ಟಿ ಪ್ರಶ್ನಿಸಿದರು. ಶಾಸಕಿ ಇದಕ್ಕೆ ಧ್ವನಿಗೂಡಿಸಿ, ಇದರ ಹಿಂದಿನ ಉದ್ದೇಶ ಏನು? 100ಫೀಟ್ ಆಗಿರುವುದನ್ನು 300 ಫೀಟ್ ಎಂದು ಲೆಕ್ಕ ಕೊಡುವುದಕ್ಕೋ? ಅಥವಾ ನೀರಿಲ್ಲ ಎಂದ ಮುಚ್ಚಿ ಬಿಡುವುದಕ್ಕೋ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಉತ್ತರಿಸಲು ಪ್ರಯತ್ನಿಸಿದರೂ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು ಎಂದು ಶಾಸಕಿ ಸೂಚಿಸಿದರು. ಹಂದಿ ಫಾರಂ ವಾಸನೆ
ಕಾಣಿಯೂರು ಗ್ರಾಮದ ಬಂಡಾಜೆ ಪರಿಸರದಲ್ಲಿ ಹಂದಿ ಫಾರಂನಿಂದ ವಾಸನೆ ಹಬ್ಬಿ ಜನರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅದನ್ನು ತನಿಖೆ ನಡೆಸಲು ಬಂದ ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕಿ ಅಲ್ಲಿ ವಾಸನೆ ಬರುತ್ತಿಲ್ಲ ಎಂದು ವರದಿ ನೀಡಿದ್ದಾರೆ. ಇಂತಹ ಕಾಟಚಾರದ ತನಿಖೆ ನಡೆಸುವುದು ಏತಕ್ಕೆ ಎಂದು ಕೆಡಿಪಿ ಸದಸ್ಯ ಅಶೋಕ್ ಸಂಪ್ಯ ಪ್ರಶ್ನಿಸಿದರು. ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಾಸನೆಯೇ ಬರುತ್ತಿಲ್ಲ ಅನ್ನುವ ವರದಿ ಅಚ್ಚರಿ ಸಂಗತಿ. ಅದಕ್ಕೆ ಪರಿಹಾರ ಸೂಚಿಸುವ ಬದಲು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಹಶೀಲ್ದಾರ್ ಅನಂತಶಂಕರ, ಪ್ರಕಾಶ್ ರೊಡ್ರಿಗಸ್, ತಾ.ಪಂ. ಇ.ಒ. ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುತ್ತೂರು ತಾಲೂಕು ಪಂಚಾಯತ್ ಕೆಡಿಪಿ ತ್ತೈಮಾಸಿಕ ಸಭೆ ಜರಗಿತು. ಕಿರುಕುಳ ಬೇಡ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿನಿಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೃಷ್ಣ ಪ್ರಸಾದ್ ಆಳ್ವ ಗಮನ ಸೆಳೆದರು. ಕುಂಬ್ರದಲ್ಲಿ ವಿದ್ಯಾರ್ಥಿನಿಯ ಕೈಯಲ್ಲಿ ಪಾಸ್ ಇಲ್ಲದ್ದಕ್ಕೆ ನಿರ್ವಾಹಕ ಕೆಟ್ಟ ಪದಗಳಿಂದ ಬೈದಿದ್ದಾರೆ. ಕೆಲವಡೆ ಬಸ್ ನಿಲ್ಲಿಸುತ್ತಿಲ್ಲ. ಇಂತಹ ಅನೇಕ ಉದಾಹರಣೆಗಳು ಇವೆ ಎಂದು ಸಭೆಯಲ್ಲಿ ಆಕ್ಷೇಪ ಕೇಳಿ ಬಂತು. ಶಾಸಕಿ ಮಾತನಾಡಿ, ಇಂತಹ ದೂರು ನನ್ನ ಗಮನಕ್ಕೂ ಬಂದಿದೆ.ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅಂಥ ಕಂಡೆಕ್ಟರ್, ಚಾಲಕರನ್ನು ಕರೆದು ಮಾತನಾಡಿಸಿ ತಿಳಿವಳಿಕೆ ಹೇಳಿ. ಸಂಜೆ ವೇಳೆ ವಿದ್ಯಾರ್ಥಿಗಳನ್ನು ಅವರು ಹೇಳಿದ ಸ್ಥಳದಲ್ಲೇ ಇಳಿಸಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರನ್ನು ಸಂಜೆ 6 ಗಂಟೆಗೆ ಕತ್ತಲು ಆಗುವುದರಿಂದ ಮನೆ ತಲುಪಲು ಸಮಸ್ಯೆ ಉಂಟಾಗುತ್ತದೆ. ತತ್‌ಕ್ಷಣ ಈ ಬಗ್ಗೆ ಗಮನ ಹರಿಸುವಂತೆ ಕೆಎಸ್‌ಆರ್ ಟಿಸಿ ಅಧಿಕಾರಿಗೆ ಸೂಚಿಸಿದರು.