Advertisement

17ರಲ್ಲಿ ಹಲವರಿಗೆ ಮತ್ತೆ ಚಾನ್ಸ್‌!

11:20 PM Aug 20, 2019 | Team Udayavani |

ಬೆಂಗಳೂರು: ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರಲ್ಲಿ ಹನ್ನೆರಡು ಮಂದಿ ಮತ್ತೆ ಸಚಿವರಾಗುವ ಅವಕಾಶ ಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ, ಎಸ್‌.ಸುರೇಶ್‌ಕುಮಾರ್‌, ಗೋವಿಂದ ಕಾರಜೋಳ, ಕೆ.ಎಸ್‌. ಈಶ್ವರಪ್ಪ, ಲಕ್ಷ್ಮಣ ಸವದಿ, ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ಶ್ರೀರಾಮುಲು, ವಿ.ಸೋಮಣ್ಣ, ಸಿ.ಸಿ. ಪಾಟೀಲ್‌, ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲೂ ಅವಕಾಶ ಪಡೆದಿದ್ದರು.

Advertisement

ಈಗಲೂ ಅವಕಾಶ ಸಿಕ್ಕಂತಾಗಿದೆ. ಉಮೇಶ್‌ ಕತ್ತಿ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಮುರುಗೇಶ್‌ ನಿರಾಣಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್‌, ಹಾಲಾಡಿ ಶ್ರೀನಿವಾಸಶೆಟ್ಟಿ, ಕೆ.ಜೆ.ಬೋಪಯ್ಯ, ಎಸ್‌.ಎ.ರಾಮದಾಸ್‌ ಪ್ರಮುಖವಾಗಿ ಸಂಪುಟದಲ್ಲಿ ಸ್ಥಾನ ಸಿಕ್ಕೇ ಸಿಗುವ ವಿಶ್ವಾಸದಲ್ಲಿದ್ದರು.

ಆದರೆ, ಪಕ್ಷೇತರ ಶಾಸಕ ನಾಗೇಶ್‌, ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್‌, ಡಾ.ಅಶ್ವಥ್‌ನಾರಾಯಣ ,ಮಾಧುಸ್ವಾಮಿ ಅವರಿಗೆ “ಲಕ್‌’ ಕುದುರಿದೆ. 2006 ರಲ್ಲಿ ಬಿಜೆಪಿ-ಜೆಡಿಎಸ್‌ ಸರ್ಕಾರದಲ್ಲೂ ಎಸ್‌.ಸುರೇಶ್‌ಕುಮಾರ್‌, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ಶ್ರೀರಾಮುಲು ಸಚಿವರಾಗಿದ್ದರು. ಇವರಿಗೆ ಮೂರನೇ ಬಾರಿ ಅವಕಾಶ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next