Advertisement

Congress ಪಾಲಿಗೆ ಕರ್ನಾಟಕ ಅಕ್ಷರಶಃ ಎಟಿಎಂ: ಗೋವಾ ಸಿಎಂ ಸಾವಂತ್

06:22 PM Mar 07, 2024 | Team Udayavani |

ದಾವಣಗೆರೆ: ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅಕ್ಷರಶಃ ಎಟಿಎಂ ಆಗಿದ್ದು, ಎರಡೂ ಕೈಗಳಿಂದ ಜನರಿಂದ ಲೂಟಿ ಮಾಡಿದ ಹಣವನ್ನ ಕಾಂಗ್ರೆಸ್‌ನ ಚಟುವಟಿಕೆಗಳಿಗೆ ಇಲ್ಲಿಂದ ಹಣ ಕಳಿಸಿ ಕೊಡಲಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ.

Advertisement

ಗುರುವಾರ ಧಾರವಾಡ ಕ್ಲಸ್ಟರ್ ಮಟ್ಟದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ, ಕರ್ನಾಟಕದಲ್ಲಿ ಈಗ ಭ್ರಷ್ಟಾಚಾರಿ, ಕ್ರಿಮಿನಲ್, ಕೋಮುವಾದಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ10 ತಿಂಗಳಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಿಂತಿವೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ಡಬಲ್ ಆಗಿದೆ” ಎಂದರು.

ಸಚಿವ ಸಂಪುಟದ ಆಪ್ತ ರೊಬ್ಬರ ಮನೆಯಲ್ಲಿ ಕೋಟ್ಯಾಂತರ ಹಣ ದೊರೆತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅಕ್ಷರಶಃ ಎಟಿಎಂ ಆಗಿದೆ. ಎರಡೂ ಕೈಗಳಿಂದ ಜನರಿಂದ ಲೂಟಿ ಮಾಡಿದ ಹಣವನ್ನ ಕಾಂಗ್ರೆಸ್‌ನ ಚಟುವಟಿಕೆಗಳಿಗೆ ಇಲ್ಲಿಂದ ಹಣ ಕಳಿಸಿ ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಜಾತಿ ಮತ್ತು ಧರ್ಮಗಳ ವಿಭಜನೆಯ ಆಧಾರದಲ್ಲಿ ಆಡಳಿತ ನಡೆಸುತ್ತಿದೆ.ಸಮಗ್ರ ಅಭಿವೃದ್ಧಿ, ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವುದರಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದನ್ನೇ ಮರೆತಿದೆ. ಈಚೆಗೆ ದೇವಸ್ಥಾನದಲ್ಲಿನ ಹುಂಡಿಯಲ್ಲಿನ ಹಣಕ್ಕೂ ಸರ್ಕಾರ ಕೈ ಹಾಕಿತ್ತು. ಆದರೆ, ಜನರ ವಿರೋಧದಿಂದ ಕೈ ಬಿಟ್ಟಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಿದ್ದು ಪಿಎಫ್‌ಐ ಚಟುವಟಿಕೆಗಳು ಮತ್ತೆ ಹೆಚ್ಚಾಗಿವೆ ಎಂದರು.

ರಾಜ್ಯದಲ್ಲಿ ಐವರು ಸಿಎಂ

Advertisement

ಕರ್ನಾಟಕದಲ್ಲಿ ಒಬ್ಬರಲ್ಲ ಐವರು ಮುಖ್ಯಮಂತ್ರಿಗಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ. ಅವರನ್ನ ಕೆಳಗಿಳಿಸಿ ಮುಖ್ಯಮಂತ್ರಿ ಆಗಲು ಡಿ.ಕೆ. ಶಿವಕುಮಾರ್ ಹೊಂಚು ಹಾಕುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಡೆಪ್ಯುಟಿ ಚೀಫ್ ಮಿನಿಸ್ಟರ್ ಅಲ್ಲ. ಅವರು ಡಮ್ಮಿ ಚೀಫ್ ಮಿನಿಸ್ಟರ್. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೂರ ತಳ್ಳಿ ಮುಖ್ಯಮಂತ್ರಿ ಆಗಲು ಹವಣಿಸುತ್ತಿರುವ, ದೆಹಲಿಯಲ್ಲಿ ಕಾರ್ಯಾಚರಣೆ ನಡೆಸುವ ಸತೀಶ್ ಜಾರಕಿಹೊಳಿ ಫ್ಯೂಚರ್ ಮುಖ್ಯಮಂತ್ರಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಯವರನ್ನ ಸೈಡ್ ಲೈನ್ ಮಾಡಿ ಮುಖ್ಯಮಂತ್ರಿ ಆಗಲು ಡಾ| ಜಿ. ಪರಮೇಶ್ವರ್ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅವರ ತಂದೆ ಎಲ್ಲರಗಿಂತಲೂ ಮೇಲೆ ಇರುವ ಕಾರಣಕ್ಕೆ ಪ್ರಿಯಾಂಕ ಖರ್ಗೆ ಸೂಪರ್ ಸಿಎಂ. ಇವರೆಲ್ಲರ ಜೊತೆ ಡಾ| ಯತೀಂದ್ರ ಸಿದ್ದರಾಮಯ್ಯ ಎಂಬ ಶ್ಯಾಡೋ ಮುಖ್ಯಮಂತ್ರಿ ಸಹ ಇದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ?” ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next