Advertisement

‘ಏಕಾಗ್ರತೆ, ಆರೋಗ್ಯಕ್ಕೆ ಯೋಗದಲ್ಲಿದೆ ಮದ್ದು’

01:10 PM Jun 06, 2018 | Team Udayavani |

ನಗರ : ನಿರಂತರವಾಗಿ ಯೋಗ ಮಾಡುತ್ತಿದ್ದರೆ ಜೀವನ ಶೈಲಿ ಬದಲಾಯಿಸಿಕೊಳ್ಳಲು ಸಾಧ್ಯ. ಮಾತ್ರವಲ್ಲ ಬದುಕಿನ ಒತ್ತಡಗಳನ್ನು ನಿವಾರಿಸಿ, ಏಕಾಗ್ರತೆ, ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ಪುತ್ತೂರು ಸರಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ| ಸಾತ್ವಿಕಾ ವೈ.ಕೆ. ಆವರು ಅಭಿಪ್ರಾಯಪಟ್ಟರು.

Advertisement

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪುತ್ತೂರು ಹಿರಿಯ ನಾಗರಿಕ ಹಿತರಕ್ಷಣ ವೇದಿಕೆ ವತಿಯಿಂದ ಸಮುದಾಯ
ಭವನದಲ್ಲಿ ಮಂಗಳವಾರ ನಡೆದ ಯೋಗ ಮಾಹಿತಿ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಯೋಗವನ್ನು ಬಳಸಿಕೊಳ್ಳಬೇಕು. ಆರೋಗ್ಯ ರಕ್ಷಣೆಯತ್ತ ನಾವು ದೃಷ್ಟಿ ಇಟ್ಟು ಯೋಗದಿಂದ ಅದನ್ನು ಸಾಧಿ ಸಲು ಮುಂದಾಗಬೇಕು. ಜೂನ್‌ 6ರಿಂದ 30ರ ವರೆಗೆ ಸಂಜೆ 5ರಿಂದ 6 ಗಂಟೆ ವರೆಗೆ ಪುತ್ತೂರು ಸಮುದಾಯ ಭವನದಲ್ಲಿ ಯೋಗ ಶಿಬಿರ ನಡೆಯಲಿದೆ. ಇದರಲ್ಲಿ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನಾಗರಿಕ ಹಿತರಕ್ಷಣ ವೇದಿಕೆ ಸದಸ್ಯ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ ಮಾತನಾಡಿ, ಋಷಿಮುನಿಗಳ ಕಾಲದಲ್ಲೂ ಯೋಗ ಚಾಲ್ತಿಯಲ್ಲಿತ್ತು. ಆರೋಗ್ಯ ರಕ್ಷಣೆ ಸುಲಭ ಮಾರ್ಗವಾಗಿರುವ ಈ ಯೋಗವನ್ನು ಜನಸಾಮಾನ್ಯರ ಬದುಕಿಗೆ ಮುಟ್ಟಿಸಲು ಇನ್ನೂ ಸಾಧ್ಯವಾಗಿಲ್ಲ. ಯೋಗದ ಮೂಲಕ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಅಸಹಾಯಕರ ಸೇವಾ ಟ್ರಸ್ಟ್‌ ಅಧ್ಯಕ್ಷೆ ನಯನಾ ರೈ ಮಾತನಾಡಿ, ಒತ್ತಡದ ಬದುಕಿಗೆ ಚೈತನ್ಯ ತುಂಬುವ ಯೋಗವನ್ನು ನಮ್ಮ ಬದುಕಿನಲ್ಲಿ ಅಳಡಿಸಿಕೊಳ್ಳಬೇಕು. ಇದರಿಂದ ಕುಟುಂಬದ ಆರೋಗ್ಯವನ್ನು ಕಾಪಾಡಬಹುದು ಎಂದರು.

ಹಿರಿಯ ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಜನಾರ್ದನನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ಯಾಟ್ರಿಕ್‌ ಲೋಬೊ ನಿರೂಪಿಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಹಾಗೂ ಯೋಗ, ಉಜಿರೆ ನೈತಿಕ ಶಿಕ್ಷಣ ಯೋಜನೆ, ಹೊಸದಿಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಶೋಧನಾ ಸಂಸ್ಥೆ, ಜಿಲ್ಲಾ ಆಯುಷ್‌ ಇಲಾಖೆಯ ಆಶ್ರಯದಲ್ಲಿ ಮಾಹಿತಿ ಶಿಬಿರ ಏರ್ಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next