Advertisement
ನಾನೂ ಸೇರಿದಂತೆ ಬಹುತೇಕ ಸಾಹಿತಿಗಳ ವಿಮರ್ಶೆಗಳು ಸಂಕೀರ್ಣವಾಗಿರುತ್ತವೆ. ಇದರಿಂದ ಅವು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹಾಗಾಗಿ, ಸಾಧ್ಯವಾದಷ್ಟು ಸರಳೀಕೃತವಾಗಿ ವಿಮರ್ಶೆ ಬರೆಯುವುದನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ವಿಮರ್ಶೆ ಮಾದರಿ ಎಂದರು.
Related Articles
Advertisement
ಪ್ರೊ.ಅ.ರಾ. ಮಿತ್ರ, ನೀಳಾದೇವಿ ಅವರಿಗೆ ಮಾಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ಕಿ ಕೃಷ್ಣಮೂರ್ತಿ ಅವರಿಗೆ “ಮಾಸ್ತಿ ಕಥಾ ಪುರಸ್ಕಾರ’, ಡಾ.ಬಾಲಾಸಾಹೇಬ ಲೋಕಾಪುರ ಅವರಿಗೆ “ಮಾಸ್ತಿ ಕಾದಂಬರಿ ಪುರಸ್ಕಾರ’ ಹಾಗೂ ಚಂದ್ರ ಪುಸ್ತಕ ಮತ್ತು ಕಣ್ವ ಪ್ರಕಾಶನ ಸಂಸ್ಥೆಗಳಿಗೆ “ಮಾಸ್ತಿ ಪುರಸ್ಕಾರ’ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ನ್ಯಾಷನಲ್ ಕಾಲೇಜು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ರಾಮರಾವ್ ಹಾಗೂ ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಉಪಸ್ಥಿತರಿದ್ದರು.
ಜ್ಞಾನಪೀಠ ಮೊದಲು ಯಾರಿಗೆ ಸಿಗಬೇಕಿತ್ತು?: ಪ್ರೊ.ಜಿ.ಎಚ್. ನಾಯಕ ಮಾತನಾಡಿ, ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮೂವರಾದ ಕುವೆಂಪು, ದಾ.ರಾ. ಬೇಂದ್ರೆ ಮತ್ತು ಶಿವರಾಮ ಕಾರಂತ ಅವರಿಗಿಂತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಿರಿಯರು. ಕುವೆಂಪು ಅವರಿಗೆ 1958ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿದರೆ, ಮಾಸ್ತಿ ಅವರಿಗೆ 1983ರಲ್ಲಿ ಘೋಷಿತವಾಯಿತು.
ಮಾಸ್ತಿರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ಚಿಕ್ಕವೀರ ರಾಜೇಂದ್ರ ಕಾದಂಬರಿ 1956ರಲ್ಲಿ ರಚನೆಯಾಗಿತ್ತು. ಹೀಗಾಗಿ, ಕುವೆಂಪು ನಂತರ ಮಾಸ್ತಿ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು. ಆದರೆ, ಮಾಸ್ತಿಯವರಿಗೆ ಏಕೆ ಬೇಂದ್ರೆ ಮತ್ತು ಕಾರಂತರ ನಂತರ ಜ್ಞಾನಪೀಠ ನೀಡಲಾಯಿತು? ಎಂಬುದು ಈಗಲೂ ನನ್ನನ್ನು ಕಾಡುತ್ತದೆ ಎಂದರು.