Advertisement

“ಕಾಂಕ್ರೀಟ್‌ ಹಾಸು,ತಗಡು ಶೀಟು ನಾಗಬನ ಯಾರಿಗಾಗಿ?’

01:00 AM Feb 20, 2019 | Team Udayavani |

ಉಡುಪಿ: ಮರಗಿಡಗಳು ಇರುವ ನೈಸರ್ಗಿಕ ನಾಗ”ಬನ’ದಿಂದ ಅನೇಕ ಸೂಕ್ಷ್ಮಜೀವಿಗಳಿಗೆ ವಾಸಸ್ಥಾನವಾಗಿ ಪರಿಸರದಲ್ಲಿ ಅಂತರ್ಜಲವೂ ವೃದ್ಧಿಯಾಗುತ್ತದೆ. ಈಗಿನಂತೆ ಕೆಳಗೆ ಕಾಂಕ್ರೀಟ್‌ ಹಾಸು, ಮೇಲ್ಗಡೆ ತಗಡಿನ ಶೀಟುಗಳಿದ್ದರೆ ಇರುವೆ ಸೇರಿದಂತೆ ಯಾವ ಜೀವಿಗಳೂ ಇರಲಾರವು. ಇಂತಹ ನಾಗ”ಭವನ’ವನ್ನು ಯಾರಿಗಾಗಿ ನಿರ್ಮಿಸುವುದು ಎಂದು ಉರಗತಜ್ಞ ಗುರುರಾಜ ಸನಿಲ್‌ ಪ್ರಶ್ನಿಸಿದರು. 

Advertisement

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಬೀಯಿಂಗ್‌ ಸೋಶಿಯಲ್‌, “ನಮ್ಮ ಮನೆ ಮತ್ತು ನಮ್ಮ ಮರ’ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾಗಬನದ ಗಿಡಮರಗಳನ್ನು ಹಾಗೆಯೇ ಉಳಿಸಿಕೊಳ್ಳಿ. ಇದರ ಹಿಂದೆ ಹಿರಿಯರು ಇಟ್ಟ ನಂಬಿಕೆ ಇದೆ. ಇದು ಆರೋಗ್ಯಪೂರ್ಣ ನಂಬಿಕೆ ಎಂದರು.  
ನಾಗರ ಪಂಚಮಿ ಹಿಂದಿನ ದಿನಗಳಲ್ಲಿ ಪ್ರಾಮಾಣಿಕತೆಯಿಂದ ಪೂಜಿಸಿಕೊಂಡು ಬರುತ್ತಿದ್ದರು ಎಂದರು. 
ಮುಟ್ಟಾದವರ ಮನೆಗೆ ನಾಗರ ಹಾವು ಬರುತ್ತದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಾಸನೆಯನ್ನು ಅರಸಿ ಇಲಿ ಬರುತ್ತದೆ. ಇಲಿಯನ್ನು ಅರಸಿ ಹಾವು ಬರುತ್ತದೆ. ಆದ್ದರಿಂದ ಮೀನು, ಮಟನ್‌, ಮೂಳೆ ಇತ್ಯಾದಿಗಳನ್ನು ಬಳಸಿದ ಬಳಿಕ ಶುದ್ಧವಾಗಿರಿಸಿಕೊಳ್ಳಬೇಕು. ಇದುವೇ “ಅಶುದ್ಧ’ ಎಂದರು. 

ಹಾವುಗಳನ್ನು ಕೊಂದರೆ ಶಿಕ್ಷೆ
1972ರಲ್ಲಿ ಜಾರಿಗೆ ಬಂದ ಕಾಯಿದೆ ಪ್ರಕಾರ ಎಲ್ಲ ಹಾವುಗಳನ್ನು ಕೊಲ್ಲುವುದೂ ವನ್ಯಜೀವಿ ಕಾಯಿದೆ ಪ್ರಕಾರ ಶಿಕ್ಷಾರ್ಹವಾಗಿದೆ. ವಿಶೇಷವಾಗಿ ಹೆಬ್ಟಾವು ಸತ್ತರೆ ಅರಣ್ಯ ಇಲಾಖೆಯವರಿಗೆ ಹೇಳುವುದು ಉತ್ತಮ. ಹೆಬ್ಟಾವನ್ನು ಹೆಚ್ಚಿಗೆ ಕುತ್ತಿಗೆಗೆ ಮಾಲೆ ಮಾಡಿ ಹಾಕುತ್ತಾರೆ. ಇದು ಸರಿಯಲ್ಲ. ಇದರಿಂದ ಅಪಾಯ ಸಾಧ್ಯತೆ ಇದೆ ಎಂದರು. 

ನಾಗನಿಗೇಕೆ ಪೂಜ್ಯತೆ?
ಕೋಪ. ಪ್ರೀತಿ, ಉಪಕಾರ- ಅಪಕಾರ, ವಿಷದ ಪ್ರಯೋಜನ ಮತ್ತು ಅಪಾಯ ಇವೆಲ್ಲದರದೃಷ್ಟಿಯಲ್ಲಿ ಇತರ ಹಾವುಗಳಿಗಿಂತ ಮೇಲ್ಮಟ್ಟದಲ್ಲಿರುವುದರಿಂದ ಪೂಜನೀಯ ಸ್ಥಾನ ಬಂತು. ಇದಕ್ಕೆ ಪ್ರಾರ್ಥನೆ ಸಲ್ಲಿಸಿದರೆ ಸ್ಪಂದಿಸುವ ಗುಣ ಇದೆ. ಇದು ಕಂಪನದಿಂದ ಸಾಧ್ಯವಾಗಿರಬಹುದು. ಅರಸಿನದಲ್ಲಿ ಆ್ಯಂಟಿ ಸೆಪ್ಟಿಕ್‌ ಗುಣ ಇರುವುದರಿಂದ ಅರಸಿನದ ನೀರು ಹಾಕಿದರೆ ಪ್ರಯೋಜನ. ನಾವು ಪ್ರಕೃತಿ ಮತ್ತು ಸಕಲ ಜೀವಿಗಳೊಂದಿಗೆ ಪ್ರೀತಿಯಿಂದ ಇದ್ದರೆ ಪ್ರಶ್ನೆಯೂ, ಸಂಘರ್ಷವೂ ಉದ್ಭವಿಸುವುದಿಲ್ಲ ಎಂದರು. 
ಅವಿನಾಶ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು. 

ವಾಹನ ಅವಘಡವೂ ಹಾವಿನ ಕಡಿತವೂ
ವಾಹನ ಅವಘಡಗಳಿಂದ ಸಾಯುವಷ್ಟು ಶೇ. 1ರಷ್ಟು ಪ್ರಮಾಣದಲ್ಲಿಯೂ ಹಾವಿನ ಕಡಿತದಿಂದ ಸಾಯುವುದಿಲ್ಲ. ಆದರೆ ಹಾವಿನ ಕಡಿತದಿಂದ ಸತ್ತರೆ ಇಡೀ ಊರು ರಾತ್ರಿ ಇಡೀ ನಿದ್ರೆ ಬಿಡುತ್ತದೆ. ವಾಹನ ಅವಘಡಗಳ ಬಗ್ಗೆ ಈ ತೆರನಾಗಿ ಗಮನ ಹರಿಸುವುದಿಲ್ಲ. 

Advertisement

-ಗುರುರಾಜ ಸನಿಲ್‌ 

Advertisement

Udayavani is now on Telegram. Click here to join our channel and stay updated with the latest news.

Next