Advertisement
ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್ ಪಾತ್‌ಗಳಿಗೆ ಹಾಸಿದ್ದ ಸಿಮೆಂಟ್ ಸ್ಲ್ಯಾಬ್ ಮುರಿದು ಚರಂಡಿಗಳು ತೆರೆದುಕೊಂಡಿವೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗುತ್ತಿದೆ. ಆದರೆ ಇಲ್ಲಿನ ಫುಟ್‌ಪಾತ್‌ಗಳ ದುಃಸ್ಥಿತಿ ನೋಡಿದರೆ ಗಂಭೀರವೆನಿಸುತ್ತದೆ. ಕಾಂಕ್ರೀಟ್ ರಸ್ತೆಗಳಾಗಿ ವರ್ಷ ಕಳೆದರೂ ಅಲ್ಲಿ ಫುಟ್‌ಪಾತ್ ನಿರ್ಮಾಣವಾಗಿಲ್ಲ. ಸಾರ್ವಜನಿಕರಿಂದ ಫುಟ್‌ಪಾತ್ ಸಮಸ್ಯೆ ಬಗ್ಗೆ ಪ್ರತಿನಿತ್ಯ ದೂರುಗಳು ಬರುತ್ತಿ ದ್ದರೂ ಪಾಲಿಕೆಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎನ್ನುವುದು ನಗರವಾಸಿಗಳ ಆರೋಪ. ಈ ಹಿನ್ನೆಲೆಯಲ್ಲಿ ನಗರದ ಎಂ.ಜಿ. ರೋಡ್, ಕೆ.ಎಸ್.ರಾವ್ ರೋಡ್, ಕುಳೂರು ಫೆರ್ರಿ ರೋಡ್(ಲೇಡಿಹಿಲ್‌ನಿಂದ – ಮಣ್ಣಗುಡ್ಡೆ ರಸ್ತೆ), ಪಿ.ವಿ.ಎಸ್. ವೃತ್ತ- ಬಂಟ್ಸ್ ಹಾಸ್ಟೆಲ್ ಸೇರಿದಂತೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿರುವ ಫುಟ್ ಪಾತ್‌ಗಳಲ್ಲಿ ಸದ್ಯದ ಸ್ಥಿತಿಯನ್ನು ‘ಸುದಿನ’ ಸೆರೆ ಹಿಡಿದಿರುವುದು. Advertisement
ನಗರದಲ್ಲಿ ಬಾಯ್ದೆರೆದಿರುವ ಫುಟ್‌ಪಾತ್‌ಗಳು!
10:05 AM Sep 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.