Advertisement
ಅಚಾರಿಜೋರದ ಡಾಮರು ರಸ್ತೆಯಿಂದ ಮಸೀದಿ ಪಕ್ಕದಲ್ಲಿ ಹಾದುಹೋಗಿರುವ ಸುಮಾರು 200 ಮೀಟರ್ ಉದ್ದದ ಕಾಲು ದಾರಿ ಕುಸಿದುಹೋಗಿದೆ. ಇದರಿಂದ ಇಲ್ಲಿನವರು ಸಂಚರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇವಲ 2ರಿಂದ 3 ಅಡಿಯಷ್ಟೇ ಅಗಲವಾಗಿರುವ ಈ ಕಾಲುದಾರಿ ನಾದುರಸ್ಥಿಯಲ್ಲಿದ್ದು, ಅದರ ಪಾರ್ಶ್ವದ ಭಾಗಗಳೆಲ್ಲಾ ಕುಸಿದು ಸರಿನಿಂದ ಆವೃತವಾಗಿದೆ. ಅದರ ಪಕ್ಕ 15 ಅಡಿಯಷ್ಟು ಆಳವಿದ್ದು, ಸ್ವಲ್ಪ ಎಡವಿದರೂ ಕಂದಕಕ್ಕೆ ಬೀಳುವ ಅಪಾಯವಿದೆ.
ಇಲ್ಲಿನ ಸುಮಾರು 10 ಮನೆಗಳಿಗೆ ಏಕೈಕ ಸಂಪರ್ಕ ದಾರಿ ಇದಾಗಿದ್ದು, ಯಾರಿಗಾದರೂ ಅನಾರೋಗ್ಯ ಕಾಣಿಸಿದರೆ
ಡಾಮರು ರಸ್ತೆಯವರೆಗೆ ಹೊತ್ತುಕೊಂಡೇ ಸಾಗಬೇಕಾಗುತ್ತದೆ. ಕಾಲುದಾರಿ ಅಗಲ ಕಿರಿದಾಗಿರುವುದರಿಂದ ಎದುರುಬದುರು ಸಾಗುವಂತಿಲ್ಲ. ಈ ಕಾಲುದಾರಿಯನ್ನು ಕಾಂಕ್ರೀಟ್ ಮೂಲಕವಷ್ಟೇ ಸರಿಪಡಿಸಲು ಸಾಧ್ಯ. ಮಳೆಗಾಲದಲ್ಲಿ ಕಾಲುದಾರಿ ಕುಸಿದರೆ ಮತ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರ ಕಾಂಕ್ರೀಟ್
ಅಚಾರಿಜೋರದ ಹಲವು ಮನೆಗಳಿಗೆ ಕಾಲುದಾರಿ ಸಮಸ್ಯೆ ಇದೆ. ಈ ದಾರಿ ಕಿರಿದಾಗಿದ್ದು, ಹಲವಾರು ಮನೆಗಳು ಕೂಡಾ ಇವೆ. ಶೀಘ್ರದಲ್ಲೇ ಇಲ್ಲಿಗೆ ತಡೆಗೋಡೆ ಹಾಗೂ ಕಾಂಕ್ರೀಟ್ ಕಾಲುದಾರಿ ನಿರ್ಮಿಸಿಕೊಡಲಾಗುವುದು.
– ಲೀಲಾವತಿ,ಅಧ್ಯಕ್ಷರು, ಕುಪ್ಪೆಪದವು ಗ್ರಾ.ಪಂ.
Related Articles
‘ಕಾಲುದಾರಿ ಇಲ್ಲದೆ ಹಲವಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಆರೋಗ್ಯ ಕೆಟ್ಟರೆ ರೋಗಿಯನ್ನು ಹೊತ್ತುಕೊಂಡು ಹೋಗಬೇಕಾಗುತ್ತದೆ. ರಾತ್ರಿ ಹೊತ್ತಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ.
-ಅಶ್ರಫ್ ಅಶೂರು, ಸ್ಥಳೀಯರು
Advertisement