ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಸದ್ಯ ಇಬ್ಬರು ಉಗ್ರರ ಗುರುತು ಪತ್ತೆಯಾಗಿದ್ದು, ಅವರೊಲ್ಲಬ್ಬ ಪಾಕಿಸ್ಥಾನದಲ್ಲಿ ಫುಟ್ ಬಾಲ್ ಆಟಗಾರನಾಗಿದ್ದು, ಕೆಲವೇ ತಿಂಗಳ ಹಿಂದೆ ಉಗ್ರ ಸಂಘಟನೆಗೆ ಸೇರಿದ್ದ ಎಂದು ವರದಿಯಾಗಿದೆ.
ಬಾರಾಮುಲ್ಲದಲ್ಲಿ ಗುರುವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ ಕೌಂಟರ್ ನಡೆದಿತ್ತು. ಘಟನೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿತ್ತು. ಹಮಾಮ್ ಪ್ರದೇಶದಲ್ಲಿ ಇಬ್ಬರು ಮೃತದೇಹ ಪತ್ತೆಯಾಗಿತ್ತು.
ಹತ್ಯೆಯಾದ ಉಗ್ರರಲ್ಲೊಬ್ಬನನ್ನು ಅಮಿರ್ ಸಿರಾಜ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ಥಾನದ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದು, ಅಲ್ಲಿನ ಫುಟ್ ಬಾಲ್ ಆಟಗಾರನಾಗಿದ್ದ. ಕಳೆದ ಜುಲೈ 2 ರಿಂದ ನಾಪತ್ತೆಯಾಗಿದ್ದ. ಸಂಬಂಧಿಕರ ಮನೆಯಿಂದ ಫುಟ್ ಬಾಲ್ ಪಂದ್ಯಕ್ಕೆಂದು ಹೋದವ ನಂತರ ಮರಳಿ ಬಂದಿರಲಿಲ್ಲ. ನಂತರೆ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿದ್ದ ಎನ್ನಲಾಗಿದೆ.
ಇದನ್ನೂ ಓದಿ:ನಿಮ್ಮ ಬಳಿಗೇ ಬರಲಿದೆ ಲಸಿಕೆ ಟ್ರಕ್: ರಾಜ್ಯಕ್ಕೆ 30 ಲಕ್ಷ ಲಸಿಕೆ ಲಭ್ಯ ಸಾಧ್ಯತೆ
ಉಗ್ರರು ಮನೆಯೊಳಗೆ ಅವಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಆದರೆ ಉಗ್ರರು ಗುಂಡು ಹಾರಿಸಲು ಆರಂಭಿಸಿದ್ದರಿಂದ ಅನಿವಾರ್ಯವಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದವು. ಬಾರಾಮುಲ್ಲ ಪೊಲೀಸ್, 29ನೇ ರಾಷ್ಟ್ರೀಯ ರೈಫಲ್ಸ್ ಮತ್ತು 176ಬಿ ಸಿಆರ್ ಪಿಎಫ್ ಜವಾನರ ಜಂಟಿ ಕಾರ್ಯಾಚರಣೆ ನಡೆಸಿದ್ದರು.