Advertisement
ಶುಕ್ರವಾರದ ಮೊದಲೆರಡು ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಬ್ರೆಝಿಲ್ ತಂಡವು ಕ್ರೊವೇಷ್ಯಾವನ್ನು ಹಾಗೂ ನೆದರ್ಲೆಂಡ್ಸ್ ತಂಡವು ಅರ್ಜೆಂಟೀನವನ್ನು ಎದುರಿಸಲಿದೆ. ಶನಿವಾರದ ಎರಡು ಪಂದ್ಯಗಳಲ್ಲಿ ಮೊರೊಕ್ಕೊ ತಂಡವು ಪೋರ್ಚುಗಲ್ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
Related Articles
Advertisement
ಐದು ಬಾರಿ ಮುಖಾಮುಖಿ: ಬ್ರೆಝಿಲ್ ಮತ್ತು ಕ್ರೊವೇಷ್ಯಾ ಒಟ್ಟಾರೆ ಐದು ಬಾರಿ ಮುಖಾಮುಖಿಯಾಗಿದ್ದು ಬ್ರೆಝಿಲ್ ಮೂರು ಬಾರಿ ಗೆಲುವು ಸಾಧಿಸಿದೆ. ಇನ್ನೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು.
ಪೀಲೆ ದಾಖಲೆ ಸನಿಹ ನೇಮಾರ್: ಉತ್ತಮ ಫಾರ್ಮ್ನಲ್ಲಿರುವ ನೇಮಾರ್ ಅವರಿಗೆ ಬ್ರೆಝಿಲ್ ಪರ ಗರಿಷ್ಠ ಗೋಲು ಹೊಡೆದಿರುವ ಪೀಲೆ ದಾಖಲೆ (77 ಗೋಲು) ಸಮಗಟ್ಟಲು ಇನ್ನೊಂದು ಗೋಲಿನ ಆವಶ್ಯಕತೆಯಿದೆ. ನೇಮಾರ್ ತನ್ನ 76ನೇ ಗೋಲನ್ನು ದಕ್ಷಿಣ ಕೊರಿಯ ವಿರುದ್ಧ ಹೊಡೆದಿದ್ದರು ಮತ್ತು ಅದನ್ನು ಪೀಲೆ ಅವರಿಗೆ ಅರ್ಪಿಸಿದ್ದರು.
ಲೊವ್ರೆನ್ ಅವರಲ್ಲದೇ 20ರ ಹರೆಯದ ಗ್ವಾರ್ಡಿಯೋಲ್ ಅದ್ಭುತ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಹಲವು ಬಾರಿ ಇತರ ಆಟಗಾರರ ಜತೆ ಹೋರಾಡಿ ಎದುರಾಳಿ ತಂಡದ ಗೋಲು ಹೊಡೆಯುವ ಅವಕಾಶವನ್ನು ತಪ್ಪಿಸಿದ್ದಾರೆ. ಕತಾರ್‌ನಲ್ಲಿ ಇಷ್ಟರವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕ್ರೊವೇಷ್ಯಾ ಎದುರಾಳಿಗೆ ಕೇವಲ ಎರಡು ಗೋಲು ಬಿಟ್ಟುಕೊಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ. ಇದೀಗ ತಂಡದ ಬಲುದೊಡ್ಡ ಸವಾಲು ಬ್ರೆಝಿಲ್ ಓಟಕ್ಕೆ ಬ್ರೇಕ್ ಹಾಕುವುದು ಆಗಿದೆ.
ಬ್ರೆಝಿಲ್ ಅದ್ಭುತ: ಇಷ್ಟರವರೆಗಿನ ಪಂದ್ಯಗಳನ್ನು ಗಮನಿಸಿದರೆ ಪೂರ್ಣ ಪ್ರಮಾಣದ ಬ್ರೆಝಿಲ್ ಅದ್ಭುತ ತಂಡವಾಗಿದೆ ಎಂದು ಕ್ರೊವೇಷ್ಯಾ ಕೋಚ್ ಜ್ಲಾಟ್ಕೊ ಡ್ಯಾಲಿಕ್ ಹೇಳಿದ್ದಾರೆ. ಆಟಗಾರರ ಗುಣಮಟ್ಟ, ಕೌಶಲ ಮತ್ತು ಮೌಲ್ಯವನ್ನು ಗಮನಿಸಿದರೆ ತಂಡವು ಅದ್ಭುತವೆಂದು ಹೇಳಬಹುದು. ನಾವು ಇದೀಗ ಅವರನ್ನು ಎದುರಿಸಬೇಕು ಎಂದು ಡ್ಯಾಲಿಕ್ ತಿಳಿಸಿದರು.