Advertisement

ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕೆ

04:19 PM Jun 02, 2018 | |

ಕಲಘಟಗಿ: ಜಾನುವಾರುಗಳು ರೈತರ ಜೀವಾಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದರೊಂದಿಗೆ ರೈತರ ಬಾಳು ಹಸನಾಗಿಸಬೇಕು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಅಧಿಕಾರಿಗಳಿಗೆ ಕರೆ ನೀಡಿದರು.

Advertisement

ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಜೂನ್‌ ತಿಂಗಳ ಪರ್ಯಂತ ಹಮ್ಮಿಕೊಂಡಿರುವ ಲಸಿಕೆ ಅಭಿಯಾನಕ್ಕೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ತಜ್ಞರ ಸಲಹೆ-ಸೂಚನೆಗಳನ್ನು ರೈತರು ಕಟ್ಟುನಿಟ್ಟಾಗಿ ಪಾಲಿಸಬೇಕು. ಲಸಿಕೆಯು ಯಾವುದೇ ಕಾರಣಕ್ಕೂ ತನ್ನ ಗುಣಮಟ್ಟ ಕಳೆದುಕೊಳ್ಳದಂತೆ ಅಧಿಕಾರಿ ವರ್ಗ ನಿಗಾ ವಹಿಸಬೇಕು ಎಂದರು. ಸ್ಥಳೀಯ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ಬಿ.ಬಿ. ಅವಾರಿ ಪ್ರಾಸ್ತಾವಿಕ ಮಾತನಾಡಿ, ಜೂ. 1ರಿಂದ 30ರ ವರೆಗೂ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಲಾಗುವುದು. ಇದೊಂದು ವೈರಾಣು ರೋಗವಾಗಿದ್ದು ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣದ ಏಕೈಕ ಮಾರ್ಗವಾಗಿದೆ. ಪೂರ್ಣ ಸುರಕ್ಷತೆಗಾಗಿ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವ ಅಗತ್ಯತೆಯಿದೆ. ತಾಲೂಕಿನಲ್ಲಿ 54,103 ದನ ಮತ್ತು ಎಮ್ಮೆಗಳಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಪಟ್ಟಣದ ಪಶು ಆಸ್ಪತ್ರೆ ಸೇರಿದಂತೆ ಮಿಶ್ರಿಕೋಟಿ, ಮುಕ್ಕಲ್ಲ, ಸಂಗಮೇಶ್ವರ, ಸೂರಶೆಟ್ಟಿಕೊಪ್ಪ, ಬೀರವಳ್ಳಿ, ತಾವರಗೇರಿ, ದೇವಿಕೊಪ್ಪ, ದುಮ್ಮವಾಡ, ಹಿರೆಹೊನ್ನಳ್ಳಿ, ತಬಕದಹೊನ್ನಳ್ಳಿ, ಗಳಗಿಹುಲಕೊಪ್ಪ, ಜಿ. ಬಸನಕೊಪ್ಪ, ಮುತ್ತಗಿ, ಕೂಡಲಗಿ, ಗಂಜೀಗಟ್ಟಿ ಗ್ರಾಮಗಳ ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಲ್ಲೂ ಲಸಿಕೆ ಹಾಕುವ ಕಾರ್ಯದಲ್ಲಿ ಪಶು ವೈದ್ಯಾ ಧಿಕಾರಿ ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next