Advertisement
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ದುಃಸ್ಥಿತಿಯಲ್ಲಿರುವ ಕಾಲುಸಂಕ ಹಾಗೂ ಕಾಲುಸಂಕ ಅಗತ್ಯ ಇರುವ ಗ್ರಾ.ಪಂ.ಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಎಲ್ಲ ಗ್ರಾ.ಪಂ.ಗಳ ಪಿಡಿಒಗಳು ಈ ಸಂಬಂಧ ವರದಿಯನ್ನು ಜಿ.ಪಂ. ಸಿಇಒ ಅವರಿಗೆ ಸಲ್ಲಿಸಿದ್ದಾರೆ. ಸಾಧ್ಯವಾದ ಎಲ್ಲ ಕಡೆಗಳಲ್ಲೂ ನರೇಗಾ ಯೋಜನೆಯಡಿ ಕಾಲುಸಂಕ ನಿರ್ಮಿಸಲು ಸೂಚನೆಯನ್ನು ನೀಡಲಾಗಿದೆ. ಅದರಂತೆ ಗ್ರಾ.ಪಂ. ಹಂತದಲ್ಲಿ ನರೇಗಾದಡಿ ಕಾಲು ಸಂಕಗಳ ನಿರ್ಮಾಣಕ್ಕೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ.ಈವರೆಗೂ ಕಾಲುಸಂಕ ನಿರ್ಮಾಣವನ್ನು ನರೇಗಾದಡಿ ಮಾಡುತ್ತಿರಲಿಲ್ಲ. ಈ ವರ್ಷ ಸುಮಾರು 3.50 ಲಕ್ಷ ರೂ. ವರೆಗಿನ ಕಾಮಗಾರಿಯನ್ನು ನರೇಗಾದ ಅಡಿ ಮಾಡಲು ಅವಕಾಶ ನೀಡಿರುವ ಜತೆಗೆ ಕಾಮಗಾರಿಗೆ ಸಂಬಂಧಿಸಿದ ಪರಿಕರಗಳ ಬಿಲ್ ಪಾವತಿಯನ್ನೂ ಶೀಘ್ರ ಮಾಡುವ ಬಗ್ಗೆ ಸರಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ. ಕೂಲಿ ಹಣ ಶೀಘ್ರ ಉದ್ಯೋಗ ಕಾರ್ಡ್ ಹೊಂದಿದವರ ಖಾತೆಗೆ ನೇರ ಜಮಾ ಆಗಲಿದೆ. ಪರಿಕರ ಬಿಲ್ ವಿಳಂಬವಾಗುತ್ತಿದೆ. ಅದನ್ನೂ ಶೀಘ್ರ ನೀಡಬೇಕು ಎಂಬ ಆಗ್ರಹವೂ ಇದೆ.
ಉಭಯ ಜಿಲ್ಲೆಯಲ್ಲಿ 20 ಲಕ್ಷಕ್ಕೂ ಅಧಿಕ ಮಾನವದಿನ ಸೃಜನೆಯ ಗುರಿ ಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾಮಗಾರಿ ಅಡಿಯಲ್ಲಿ ಕಾಲುಸಂಕಗಳ ನಿರ್ಮಾಣವೂ ನಡೆಯಲಿರುವುದರಿಂದ ಮಾನವದಿನ ಸೃಜನೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ನರೇಗಾದಡಿಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮಳೆ ಹಾಗೂ ನೀರು ಹೆಚ್ಚಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗು ತ್ತಿಲ್ಲ. ಮಳೆ ಕಡಿಮೆ ಆಗುತ್ತಿದಂತೆ ಹಂತಹಂತವಾಗಿ ಕಾಮಗಾರಿ ಆರಂಭಿಸಲಿದ್ದೇವೆ.
– ಪ್ರಸನ್ನ ಎಚ್., ಜಿ.ಪಂ. ಸಿಇಒ, ಉಡುಪಿ