Advertisement

ರೈಲ್ವೆ ಆಹಾರ ಪೊಟ್ಟಣದಲ್ಲಿ ಮಾಹಿತಿ ಕಡ್ಡಾಯ

09:15 AM Sep 22, 2017 | Team Udayavani |

ಹೊಸದಿಲ್ಲಿ: ರೈಲುಗಳಲ್ಲಿ ನೀಡುವ ಆಹಾರದ ಪೊಟ್ಟಣಗಳ ಮೇಲೆ ಪ್ರಮಾಣ, ತಯಾರಾದ ದಿನಾಂಕ, ಆಹಾರ ಸರಬರಾಜು ಗುತ್ತಿಗೆ ವಹಿಸಿಕೊಂಡಿರುವವರ ಕುರಿತು ಮಾಹಿತಿಗಳು ಕಡ್ಡಾಯವಾಗಿ ಅಚ್ಚಾಗಿರಬೇಕು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಹಾರದ ಗುಣಮಟ್ಟಗಳ ಬಗ್ಗೆ ಮೇಲಿಂದ ಮೇಲೆ ದೂರುಗಳು ಬಂದ ಕಾರಣ ಆಹಾರ ಗುಣಮಟ್ಟದ ಕುರಿತು ಸಚಿವಾಲಯ ಹೆಚ್ಚಿನ ಗಮನ ವಹಿಸುತ್ತಿದೆ. ರೈಲ್ವೇ ಮಂಡಳಿಗಳ ವಿಭಾಗೀಯ ಪ್ರಧಾನ ವ್ಯವಸ್ಥಾಪಕರಿಗೆ ಈ ನಿಟ್ಟಿನಲ್ಲಿ ಅವರು ಪತ್ರ ಬರೆದಿದ್ದಾರೆ. ಪೊಟ್ಟಣದ ದಿನಾಂಕ ಜೊತೆಗೆ ಸಸ್ಯಹಾರ ಅಥವಾ ಮಾಂಸಹಾರ ಎಂಬುದನ್ನು ಸೂಚಿಸುವಂಥ ಚಿಹ್ನೆ ಕಡ್ಡಾಯವಾಗಿ ಇರಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next