Advertisement

ಭಾರತದಲ್ಲಿ ಆಹಾರ ಮಾರುಕಟ್ಟೆ ಅನಿಯಂತ್ರಿತ: ಅಮರ್‌

05:02 AM Feb 10, 2019 | Team Udayavani |

ಮೂಡುಬಿದಿರೆ: ಭಾರ‌ತದಲ್ಲಿ ಶೇ. 31ರಷ್ಟು ಜನ ಕಡಿಮೆ ತೂಕದವರಾಗಿದ್ದಾರೆ. ದಿನವೂ 300 ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆಲ್ಲ ಇಲ್ಲಿನ ಆಹಾರ ಮಾರುಕಟ್ಟೆಯ ಶೇ. 90ರಷ್ಟು ಭಾಗ ಯಾವುದೇ ನಿಯಂತ್ರಣಗಳನ್ನು ಪಾಲಿಸದೆ ಇರುವುದೇ ಕಾರಣ ಎಂದು ಭಾರತ ಮತ್ತು ಶ್ರೀಲಂಕಾದ ಗಾಮ್ಮ ಫಿಝಾl ಕ್ರಾಫ್ಟ್‌ ಪ್ರೈ. ಲಿ.ನ ಆಡಳಿತ ನಿರ್ದೇಶಕ ಅಮರ್‌ ರಾಜ್‌ ಸಿಂಗ್‌ ಆಭಿಪ್ರಾಯಪಟ್ಟರು.

Advertisement

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ ಆಳ್ವಾಸ್‌ ಕಾಲೇಜಿನ ‘ಆಹಾರ ವಿಜ್ಞಾನ, ಪೌಷ್ಟಿಕತೆ’ಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಸಹಭಾಗಿತ್ವದಲ್ಲಿ ವಿದ್ಯಾಗಿರಿಯ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಲಾದ ‘ಆಹಾರ ಭದ್ರತೆ: ಕಾರ್ಯವಿಧಾನಗಳು, ಪೋಷಕಾಂಶಗಳು- ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು’ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ವಿಷಯದಲ್ಲಿ ಮಾರ್ಗದರ್ಶಿ ನಿಬಂಧನೆಗಳನ್ನು ಪಾಲಿಸುವ ಜತೆಗೆ ಆಹಾರ ವಿಜ್ಞಾನದಲ್ಲಿ ಭಾರತೀಕರಣ (ಇಂಡಿಯನೈಸೇಶನ್‌) ಸಾಧಿಸುವುದೂ ಅಗತ್ಯವಾಗಿದೆ. ಬರಿಯ ಉದ್ಯೋಗಾವಕಾಶಗಳ ಬಗ್ಗೆ ಚಿಂತಿಸದೆ ರಾಷ್ಟ್ರದಲ್ಲಿ ಮಾರ್ಪಾಡು ತರಬಲ್ಲ ಅಭಿವೃದ್ಧಿ ಸಾಧಿಸಲು, ಸಂಶೋಧನೆ ನಡೆಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲ ಒದಗಿಸಬೇಕಾಗಿದೆ ಎಂದು ಅವರು ಹೇಳಿದರು.

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಟ್ರಸ್ಟಿ ವಿವೇಕ್‌ ಆಳ್ವ ಅಧ್ಯಕ್ಷತೆ ವಹಿಸಿ, ಅನ್ಯದೇಶಗಳ ಶೋಧನ ತಂತ್ರಜ್ಞಾನಕ್ಕೆ ಗೋಚರಿಸದಂತೆ ಸಂರಕ್ಷಣ ಕ್ರಮಗಳನ್ನು ಭಾರತ ಅಳವಡಿಸಿಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು.

ಟೇಸ್ಟಿ ಮತ್‌ಲಬ್‌ ಗಂಜಿ ಚಟ್ನಿ
ಪರಂಪರೆಯ ಆಹಾರ ಅಭ್ಯಾಸಗಳೊಂದಿಗೆ ಜೀವಿಸಿದ ಭಾರತೀಯ ಹಿರಿಯರು ಶತಾಯುಷಿಗಳಾಗಿದ್ದರೆ, ಅವನ್ನೆಲ್ಲ ಬದಿಗಿಟ್ಟು ಜೀವನ ಶೈಲಿಯನ್ನೇ ಬದಲಾಯಿಸಿಕೊಂಡವರು ಅಲ್ಪಾಯುಷಿಗಳಾಗುತ್ತಿರುವ ಚಿತ್ರಣ ನೀಡಿದ ಅವರು, ಥಂಡಾ ಮತ್‌ಲಬ್‌ ಕೋಕಕೋಲಾ ಎನ್ನುವ ಈ ಕಾಲದಲ್ಲಿ ಟೇಸ್ಟಿ ಮತ್‌ಲಬ್‌ ಗಂಜಿ ಚಟ್ನಿ ಎಂಬ ಪ್ರಚಾರಾಂದೋಲನ ನಡೆಸಬೇಕಾಗಿದೆ ಎಂದು ಅವರು ಹೇಳಿದರು. ಆಳ್ವಾಸ್‌ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್‌ ಉಪಸ್ಥಿತರಿದ್ದರು.

Advertisement

ವಿಚಾರಸಂಕಿರಣದ ಮುಖ್ಯ ಸಂಯೋಜಕಿ, ಅಳ್ವಾಸ್‌ ಆಹಾರ ವಿಜ್ಞಾನ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ| ಅರ್ಚನಾ ಪ್ರಭಾತ್‌ ಸ್ವಾಗತಿಸಿದರು. ಆಶಿತಾ ಎಂ.ಡಿ. ವಂದಿಸಿದರು. ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ರಾಷ್ಟ್ರಗಳಿಂದ 700 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಪದಾರ್ಥ ಬೆಳೆಸುವ ಸಾಧ್ಯತೆ
ಮುಖ್ಯ ಅತಿಥಿ, ಮಂಗಳೂರು ವಿ.ವಿ. ಯೋಜನಾ ನಿರ್ದೇಶಕ ಡಾ| ಕೆ. ಎಸ್‌. ಜಯಪ್ಪ ಮಾತನಾಡಿ, ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಗಳನ್ನು ಬೆಳೆಸುವ ತುರ್ತು ಇರುವ ಪ್ರಸಕ್ತ ಸನ್ನಿವೇಶದಲ್ಲಿ ಸಾಗರೋತ್ಪ್ಪನ್ನ ಮತ್ತು ಅಕ್ವಾ ಕಲ್ಚರ್‌ನ ಮೂಲಕ ಆಹಾರ ಪದಾರ್ಥಗಳನ್ನು ಬೆಳೆಸುವ ಸಾಧ್ಯತೆಗಳನ್ನು ಹೆಚ್ಚಾಗಿ ಶೋಧಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next