Advertisement
ಸುವರ್ಣಸೌಧದಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ಬೆಲೆಗೆ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಮಂಗಳವಾರ ವಿಧಾನ ಪರಿಷತ್ ರೆಸ್ಟೋರೆಂಟ್ ಮೇಲೆ ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ 10 ರೂ. ಮುಖಬೆಲೆಯ ಬಿಸ್ಕೆಟ್ ಪ್ಯಾಕೆಟನ್ನು 20 ರೂ.ಗೆ ಮಾರಾಟ ಮಾಡಲಾಯಿತು. ರೆಸ್ಟೋರೆಂಟ್‌ನಲ್ಲಿದ್ದ ಯುವಕ ದುಪ್ಪಟ್ಟು ದರ ಪಡೆದಿದ್ದು ಮಾತ್ರವಲ್ಲ, ದರಕ್ಕೆ ಬಿಲ್ ಕೂಡ ಕೊಟ್ಟಿದ್ದಾನೆ. ಹೀಗಾಗಿ, ಸಚಿವರು ಸಹಾಯಕ ಆಹಾರ ಪರಿವೀಕ್ಷಕರನ್ನು ಕರೆದು ಸುವರ್ಣ ಸೌಧದ ಆವರಣದಲ್ಲಿರುವ ಎಲ್ಲಾ ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ದರ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಆದೇಶಿಸಿದರು.
ಮಂಗಳೂರು: ರಾಷ್ಟ್ರಮಟ್ಟದ ಗುಣಮಟ್ಟ ಮಾಪನ ಸಂಸ್ಥೆಯಾದ ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಸಚಿವ ಯು.ಟಿ. ಖಾದರ್ ಅವರನ್ನು ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರಮಟ್ಟದಲ್ಲಿ ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರು ಈ ಸಮಿತಿಯ ಅಧ್ಯಕ್ಷರಾಗಿದ್ದು, ಒಟ್ಟು 6 ಮಂದಿ ಸದಸ್ಯರಿರುವ ಬಿಐಎಸ್ ಸಂಸ್ಥೆಗೆ ದಕ್ಷಿಣ ಭಾರತದಿಂದ ಸಚಿವ ಯು.ಟಿ.ಖಾದರ್ ನೇಮಕರಾಗಿದ್ದಾರೆ.