Advertisement
ವಸತಿ ಶಾಲೆಯಲ್ಲಿ 6ರಿಂದ 8ನೇ ತರಗತಿಯ 270, 110 ಪಿಯು ವಿದ್ಯಾರ್ಥಿಗಳಿದ್ದು, ಬೆಳಗ್ಗೆ ಮಕ್ಕಳಿಗಾಗಿ ಫಲಾವ್ ಬಡಿಸಲಾಗಿತ್ತು. ಈ ವೇಳೆ ಹುಳುಗಳು ಬೀಳದಂತೆ ಸೋಯಾ ಡಬ್ಬಿಯಲ್ಲಿ ಬಟ್ಟೆ ಸುತ್ತಿ ಹಾಕಿದ್ದ ಮಾತ್ರೆ ಕಂಡು ಬಂದಿದ್ದು, ತಕ್ಷಣ ಎಚ್ಚೆತ್ತು ಊಟ ಸೇವನೆ ಮಾಡಿದ ಮಕ್ಕಳಿಗೆ ಬಿಸಿ ನೀರು ಕುಡಿಸಿ ವಾಂತಿ ಮಾಡಿಸಲಾಗಿದೆ. ಈ ವೇಳೆ ಕೆಲವು ಮಕ್ಕಳು ಭಯ ಬಿದ್ದುಅಸ್ವತ್ಥಗೊಂಡಿದ್ದರು. ತಕ್ಷಣ ಅವರನ್ನು ಕೈವಾರದ ಆಸ್ಪತ್ರೆಯಲ್ಲಿ ಗ್ಲೂಕೋಸ್ ನೀಡಿ ನಂತರ ಹಾಸ್ಟೆಲ್‌ಗೆ ಕರೆತರಲಾಗಿದೆ.
ಉಪಾಹಾರ ಸೇವನೆ ಜಾಗದಲ್ಲಿ ಸ್ವತ್ಛತೆ ಕಾಪಾಡಿಕೊಂಡು ಬಂದಿದ್ದು, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಡುಗೆಯವರ ಕಣ್ ತಪ್ಪಿದ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಚಾರ ತಿಳಿದ ತಕ್ಷಣ ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪೂರ್ಣಿಮಾ ಚೂರಿ, ತಹಶೀಲ್ದಾರ್ ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ಜಂಗನಸೀಗೇನಹಳ್ಳಿ ದೇವರಾಜ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಕ್ಕಳು ಮಾತನಾಡಿ, ನಮಗೆ ಸಮಯಕ್ಕೆ ಸರಿಯಾಗಿ ಬಿಸಿ
ಊಟ, ಶುದ್ಧವಾದ ನೀರು ಕೊಡುತ್ತಿದ್ದಾರೆ. ಜೊತೆಗೆ ಶಿಸ್ತು, ಶಿಕ್ಷಣ ಕಲಿಸುತ್ತಿದ್ದಾರೆ. ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ನುಡಿದರು.
Related Articles
Advertisement