ಸೊಲ್ಲಾಪುರ: ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಸುಮಾರು ಐವತ್ತು ಗ್ರಾಮಗಳಲ್ಲಿರುವ ದಿವ್ಯಾಂಗರು, ಕಲಾವಿದರು, ಆಟಗಾರರು, ಕಡು ಬಡವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ನೊಂದ ಜೀವಗಳಿಗೆ ಆಶಾ ಕಿರಣವಾಗಿದೆ ಎಂದು ಶರಣಪ್ಪ ಫುಲಾರಿ ಹೇಳಿದರು.
ಅಕ್ಕಲಕೋಟ ಪಟ್ಟಣದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ ಮತ್ತು ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ನೇತೃತ್ವದಲ್ಲಿ ತೋಳನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಜಗತ್ತು ಕೊರೊನಾ ಮಹಾಮಾರಿಯಲ್ಲಿ ಸಿಲುಕಿ ನರಳಾಡುತ್ತಿರುವಾಗ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವು ಸಮಾಜದಲ್ಲಿಯ ನೊಂದ ಜೀವಗಳಿಗೆ ಆಶಾ ಕಿರಣವಾಗಿ ನಿಲ್ಲುವ ಮೂಲಕ ಅಕ್ಕಲಕೋಟ ತಾಲೂಕಿನ ಸುಮಾರು 50 ಗ್ರಾಮಗಳಲ್ಲಿರುವ ಕಡು ಬಡವರಿಗೆ ಧಾನ್ಯದ ಜೊತೆಗೆ ದಿನ ನಿತ್ಯದ ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಿದೆ ಎಂದು ಹೇಳಿದರು.
ಮುಖಂಡ ಪ್ರಕಾಶ ಸುರವಸೆ ಮಾತನಾಡಿ, ಲಾಕ್‌ಡೌನ್‌ದಿಂದ ಆಹಾರ ಸಿಗದೇ ತೊಂದರೆಗೆ ಒಳಗಾಗಿರುವ ಸಾವಿರಾರು ಜನರಿಗೆ ಅನ್ನಛತ್ರ ಮಂಡಳಿ ದಿನಸಿ ಕಿಟ್ ನೀಡಿದ್ದು ಶ್ಲಾಘನೀಯ ಎಂದರು. ಅನ್ನಛತ್ರ ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ್ ಮೋರೆ, ಎನ್‌ಸಿಪಿ ಅಧ್ಯಕ್ಷ ಮನೋಜ ನಿಕ್ಕಂ, ಪ್ರವೀಣ ಘಾಡಗೆ, ಯೋಗೇಶ ಪವಾರ, ಸುಭಾಷ ಭೋಸಲೆ, ರಮೇಶ ಕೇತ್, ವೈಭವ ನವಲೆ, ಬಾಳಾಸಾಹೇಬ ಪೋಳ, ಗೋಟು ಮಾನೆ, ನಿಖೀಲ ಪಾಟೀಲ, ಸಿದ್ಧಪ್ಪ ರಬ್ಟಾ, ಚಿದಾನಂದ ಮುಗಳಿಮಠ, ಸೋಮನಾಥ ಸಂಭಾಳ, ದಸ್ತಗೀರ್ ನದಾಫ್, ಕಾಶಿನಾಥ ತಳವಾರ, ಶ್ರೀಶೈಲ ರಬ್ಟಾ ಮತ್ತಿತರರು ಇದ್ದರು.