Advertisement

ಇಂದಿರಾ ಶ್ರಮದಿಂದ ಆಹಾರ ಸ್ವಾವಲಂಬನೆ

12:27 PM Apr 23, 2017 | |

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಮಾಡಿದ್ದರಿಂದ ಭಾರತ ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

Advertisement

ಕೆಪಿಸಿಸಿ ವತಿಯಿಂದ ಇಂದಿರಾಗಾಂಧಿ ಶತಮಾನೋತ್ಸವ ಸಂಭ್ರಮಾಚರಣೆ  ಕಾರ್ಯಕ್ರಮದಲ್ಲಿ “ಇಂದಿರಾಗಾಂಧಿ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಮೇಲೆ ಆಶಯ ಭಾಷಣ ಮಾಡಿದ ಅವರು, ಭಾರತ ಕೃಷಿ ಉತ್ಪನ್ನಗಳ ಮಾರಾಟ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಅಕ್ಕಿ, ಜೋಳ, ಹತ್ತಿ, ಕಾಫಿ, ಟೀ, ಎಲ್ಲವನ್ನೂ ಭಾರತ ರಪು¤ ಮಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಂದಿರಾಗಾಂಧಿಯವರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ನೀಡಿದ ಪ್ರೋತ್ಸಾಹ ಎಂದರು.

ಪ್ರೊ. ರಿಜ್ವಾನ್‌ ಕೈಸರ್‌ ಮಾತನಾಡಿ, ಇಂದಿರಾ ಗಾಂಧಿಯವರು ಭಾರತದ ಬಡತನವನ್ನು ಹೋಗಲಾಡಿಸಲು ವಿಜ್ಞಾನ ತಂತ್ರಜ್ಞಾನದ ಮೊರೆ ಹೋದರು. ಇಂದಿರಾ ಗಾಂಧಿ ಪರಮಾಣು ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನೂ ಆಗಲೇ ಬಳಸಿ ಕೊಳ್ಳಲು ತೀರ್ಮಾನಿಸಿದ್ದರು.

ಬಾಹ್ಯಾ ಕಾಶ ತಂತ್ರಜ್ಞಾನದ ಮೂಲಕ ದೇಶದ ಪ್ರಾಕೃತಿಕ ಸಂಪತ್ತು ಮತ್ತು ಖನಿಜ ಸಂಪತ್ತಿನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಂದಿರಾಗಾಂಧಿ ಮನಗಂಡಿದ್ದರು. ಪರಿ ಣಾಮವಾಗಿ 1974 ರಲ್ಲಿ ಫೋಕ್ರಾನ್‌ ಅಣು ಬಾಂಬ್‌ ಪರೀಕ್ಷೆ, 1975ರಲ್ಲಿ ಆರ್ಯಭಟ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿ ಯಾಗಿ ಹಾರಿಸಲಾಯಿತು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ರೋಷನ್‌ ಬೇಗ್‌, ರಾಮಲಿಂಗಾ ರೆಡ್ಡಿ ಹಾಗೂ ವಿಜ್ಞಾನಿಗಳಾದ ಡಾ. ಮಹದೇವಪ್ಪ ಹಾಗೂ  ಬಿ.ವಿ. ಶ್ರೀಕಂಠನ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next