Advertisement

ಪ್ರತಿ ವಾರ್ಡ್‌ನಲ್ಲೂ ತಪಾಸಣೆ, ಆಹಾರ ಧಾನ್ಯ, ಔಷಧ ಪೂರೈಕೆ

01:31 PM Jun 03, 2021 | Team Udayavani |

ಬೆಂಗಳೂರು: “ಕ್ಷೇತ್ರದ ಪ್ರತಿ ವಾರ್ಡ್‌ನಲ್ಲೂತಪಾಸಣೆ, ಕೊರೊನಾ ಸೋಂಕು ಪತ್ತೆಯಾದರೆತಕ್ಷಣ ಆಸ್ಪತ್ರೆಗೆ ದಾಖಲು, ಮನೆ ಬಾಗಿಲಿಗೆ ಉಚಿತಆಹಾರ ಧಾನ್ಯ ಔಷಧ ಪೂರೈಕೆ’ ಚಾಮರಾಜಪೇಟೆ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಹಾಗೂ ನೆರವು ಕಾರ್ಯಗಳ ಕುರಿತು ಸ್ಥಳೀಯ ಶಾಸಕರು ಆದ ಮಾಜಿಸಚಿವ ಜಮೀರ್‌ ಅಹಮದ್‌ಮಾತುಗಳಿವು.

Advertisement

ಕೊರೊನಾ ಪರಿಸ್ಥಿತಿ ನಿರ್ವಹಣೆಕುರಿತು”ಉದಯವಾಣಿ’ ಜತೆ ಮಾತನಾಡಿದ ಅವರು, ನಿರಂತರ ಕ್ರಮಗಳಿಂದಾಗಿ ನಮ್ಮ ಕ್ಷೇತ್ರದ ಏಳೂ ವಾರ್ಡ್‌ಗಳಲ್ಲಿಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸಕ್ರಿಯಪ್ರಕರಣಗಳ ಸಂಖ್ಯೆ15 ರಿಂದ20 ಇವೆ.

ಕ್ಷೇತ್ರದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ?

ಪ್ರಸ್ತುತ ಪ್ರಕರಣಗಳು ಕಡಿಮೆ ಇವೆ. ಕ್ಷೇತ್ರದ ಪ್ರತಿ ವಾರ್ಡ್‌ನಲ್ಲೂ ವಾರಕ್ಕೆರಡು ಬಾರಿಸ್ಯಾನಿಟೈಸ್‌ ಮಾಡಿಸಲಾಗುತ್ತಿದೆ. ಪ್ರತಿ ಮನೆಗೂತೆರಳಿ ತಪಾಸಣೆ ಮಾಡಿ ಕೊರೊನಾ ಪತ್ತೆಯಾದತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.

ನಿಮ್ಮ ಕ್ಷೇತ್ರದ ಕೊರೊನಾ ಸೋಂಕಿತರಿಗೆಎಲ್ಲಿಚಿಕಿತ್ಸೆ ಕೊಡಿಸಲಾಗುತ್ತಿದೆ?

Advertisement

ಕ್ಷೇತ್ರದಲ್ಲಿ 80 ಆಕ್ಸಿಜನ್‌ ಯುಕ್ತ ಹಾಸಿಗೆ ಆಸ್ಪತ್ರೆಸ್ಥಾಪಿಸಲಾಗಿದ್ದು ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಉಚಿತ ಊಟ, ತಿಂಡಿ, ಔಷಧ ಎಲ್ಲ ವ್ಯವಸ್ಥೆಮಾಡಲಾಗಿದೆ. ಇದಲ್ಲದೆ 18 ಕೋಟಿ ರೂ. ವೆಚ್ಚದ50 ಹಾಸಿಗೆಯ ಜಗಜೀವನರಾಂ ಆಸ್ಪತ್ರೆಯನ್ನುಕೊರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.

 ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿಲ್ಲವೇ?

ಇಲ್ಲ.ಕಳೆದಬಾರಿಅದೇದೊಡ್ಡಸಮಸ್ಯೆಯಾಗಿತ್ತು.ಯಾರೂ ಮೃತದೇಹ ಪಡೆಯಲು ಬರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮ ಸ್ವಯಂಸೇವಕರ ತಂಡಖುದ್ದು ನಾನೇ ಪಿಪಿಇ ಕಿಟ್‌ ಧರಿಸಿ 586 ಜನರಅಂತ್ಯಕ್ರಿಯೆ ನಡೆಸಿದೆವು. ಅದರಲ್ಲಿ181 ಹಿಂದೂಗಳು,ಅವರ ಸಂಪ್ರದಾಯದ ಪ್ರಕಾರವೇ ಅಂತ್ಯಸಂಸ್ಕಾರಮಾಡಿದ್ದೆವು. ಈ ಬಾರಿ ಆ ರೀತಿಯ ಸಮಸ್ಯೆ ಇಲ್ಲ.

ಕ್ಷೇತ್ರದ ಬಡವರ್ಗಕ್ಕೆ ಕೈಗೊಂಡಿರುವ ನೆರವು ಕಾರ್ಯಕ್ರಮಗಳೇನು?

ಅತಿ ಹೆಚ್ಚು ಆಟೋ ಚಾಲಕರು ಇರುವುದು ನಮ್ಮಕ್ಷೇತ್ರದಲ್ಲಿ. ಗುರುತಿನ ಚೀಟಿ ಆಧಾರದಲ್ಲಿ ಮೂರುಸಾವಿರ ರೂ. ನಗದು, ಆಹಾರಧಾನ್ಯಕಿಟ್‌ ನೀಡಿದ್ದೇವೆ.ಬೀದಿ ವ್ಯಾಪಾರಿಗಳಿಗೆ 2 ಸಾವಿರ ರೂ. ನೀಡಿದ್ದೇವೆ.ನಿತ್ಯ25 ಸಾವಿರಜನರಿಗೆಊಟದಪ್ಯಾಕೇಟ್‌ ನೀಡಲಾಗುತ್ತಿದೆ. ಒಟ್ಟು 60 ಸಾವಿರ ಕುಟುಂಬಗಳಿಗೆ ಎರಡುತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ ನೀಡಲಾಗಿದೆ.

ಕೊರೊನಾ ಸೋಂಕಿತರಿಗೆ ನೀಡುತ್ತಿರುವವೈದ್ಯಕೀಯ ಸೇವೆಗಳೇನು?

ಕ್ಷೇತ್ರದಲ್ಲಿ ಮಧುಮೇಹ, ರಕ್ತದೊತ್ತಡ,ಮೂತ್ರಪಿಂಡ, ಹೃದ್ರೋಗ ಸಮಸ್ಯೆ ಇರುವವರುಹೆಚ್ಚಾಗಿದ್ದಾರೆ. ಅವರಿಗೆ ಅಗತ್ಯವಾದ ಉಚಿತ ಔಷಧಮನೆ ಮನೆಗೆ ತಲುಪಿಸುತ್ತಿದ್ದೇವೆ.

ಲಸಿಕೆ ಅಭಿಯಾನ ಯಾವ ರೀತಿ ಇದೆ?

ಲಸಿಕೆ ದಾಸ್ತಾನು ಇಲ್ಲದ ಕಾರಣ ವಿಳಂಬವಾಗಿದೆ.45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್‌ಕೊಡಿಸಲಾಗಿದೆ. 18 ರಿಂದ 44 ವರ್ಷದವರಿಗೆ ಲಸಿಕೆಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದು ದಾಸ್ತಾನು ಬಂದತಕ್ಷಣ ಆ ಕೆಲಸಕ್ಕೆ ಆದ್ಯತೆ ನೀಡಲಾಗುವುದು.

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next