Advertisement
ಭಾರತೀನಗರದ ತಮ್ಮ ನಿವಾಸದಲ್ಲಿ ಬಡವರಿಗೆ ನೀಡಲು ಅಕ್ಕಿ, ಎಣ್ಣೆ, ಬೇಳೆ, ತರಕಾರಿ ಸೇರಿದಂತೆ ಆಹಾರ ಧಾನ್ಯ ಸಂಗ್ರಹಿಸಿರುವ ಕೊಠಡಿಗಳನ್ನು ವೀಕ್ಷಿಸಿಮಾತನಾಡಿ, ಕ್ಷೇತ್ರದ ರೈತರು ಯಾವ ಆತಂಕಕ್ಕೂ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಳೆಗಳ ಮಾರಾಟಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಮಾರಾಟವಾ ಗದೆ ಉಳಿದಿರುವಂತಹ ತರಕಾರಿಗಳನ್ನು ನಾವೇ ಖರೀದಿಸಿ ಬಡವರಿಗೆ ನೀಡಲು ಮುಂದಾಗಿರುವುದಾಗಿ ತಿಳಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಸಮರ್ಪಕ ವಿದ್ಯುತ್ ಸರಬ ರಾಜಿಗೆ ತೊಂದರೆಯಾಗ ದಂತೆ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಮುಂದುವರಿದರೆ ನಿರ್ಗತಿಕರಿಗೆ, ಅನ್ನ ದಾನ ವೂ ಮುಂದು ವರಿಸಲಾಗುವುದು ಎಂದು ಹೇಳಿದರು. ಮಳ ವಳ್ಳಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಸೋಂಕು ಮಂಡ್ಯ, ನಾಗ ಮಂಗಲ, ಪಾಂಡವಪುರ, ಕೆ.ಆರ್. ಪೇಟೆ ತಾಲೂಕುಗಳಿಗೆ ಹರಡಿರು ವುದು ಅಪಾಯಕಾರಿ ಸೂಚನೆ. ಸರ್ಕಾರ ಮತ್ತು ಜಿಲ್ಲಾಡಳಿತ ಮುಂ ಜಾಗೃತಾ ಕ್ರಮ ಕೈಗೊಂಡಿ ದ್ದರೂ ಜನರ ನಿರ್ಲಕ್ಷದಿಂದ ಈ ಸೋಂಕು ಹರಡುತ್ತಿದೆ. ಆರೆಂಜ್ ಜೋನಲ್ಲಿದ್ದ ಮಂಡ್ಯ ಜಿಲ್ಲೆ ರೆಡ್‌ಜೋನ್ ಸೇರಿದೆ. ಇನ್ನಾದರೂ ತಬ್ಲೀಘಿ, ಮುಂಬೈ ವಲಸಿಗರು ಸ್ವಯಂ ಪ್ರೇರಣೆಯಿಂದ ಚಿಕಿತ್ಸೆಗೆ ಮುಂದಾಗಬೇಕೆಂದು ಹೇಳಿದರು.