Advertisement
ಬೆಳಗ್ಗೆ 7ರಿಂದ 11 ಗಂಟೆಯ ವರೆಗೆ ಜನರೂ ಅಂಗಡಿಗೆ ಬಂದು ಖರೀದಿ ಮಾಡಲು ಅವಕಾಶವಿದೆ. ಆದರೆ ಅಶಕ್ತರು, ವೃದ್ಧರು, ಅಂಗವಿಕಲರು ಸಹಿತ ಎಲ್ಲರೂ ಈ ಹೊಸ ಪ್ರಾಯೋಗಿಕ ವ್ಯವಸ್ಥೆಯ ಸದುಪಯೋಗ ಪಡೆಯಬಹುದು.
ಈ ಕುರಿತಂತೆ ಉಡುಪಿ ಜಿ.ಪಂ. ಸಿಇಒ ಪ್ರೀತಿ ಗೆಹೊÉಟ್ ಅವರ ಮಾರ್ಗ ದರ್ಶನ ಹಾಗೂ ಸಲಹೆಯೊಂದಿಗೆ ಕುಂದಾಪುರ ಉಪ ವಭಾಗದ ಎಎಸ್‌ಪಿ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದರಂತೆ “ಕೋವಿಡ್ -19 ಟಾಸ್ಕ್ಫೋರ್ಸ್’ ರಚಿಸಲಾಗಿದೆ. ವಾರ್ಡ್‌ಗೆ ಇಬ್ಬರು ಸ್ವಯಂ ಸೇವಕರನ್ನು, ಹೆಚ್ಚಿನ ಜನರಿರುವ ಕಡೆ ಮೂವರನ್ನು ಆಯ್ಕೆ ಮಾಡಲಾಗಿದೆ. ನಿವಾಸಿಗಳು ಈ ಸ್ವಯಂ ಸೇವಕರನ್ನು ಸಂಪರ್ಕಿಸಿ, ತಮ್ಮ ಅಗತ್ಯದ ವಸ್ತುಗಳ ಬೇಡಿಕೆ ಸಲ್ಲಿಸಿದರೆ ಅವರು ಮನೆ – ಮನೆಗೆ ಪೂರೈಸಲಿದ್ದಾರೆ. ಜನರು ತಮ್ಮ ವಾರ್ಡ್ ಸದಸ್ಯರು, ಪಿಡಿಒ ಅಥವಾ ಗ್ರಾ.ಪಂ.ಗಳನ್ನು ಸಂಪರ್ಕಿಸಿದರೆ ಸ್ವಯಂ ಸೇವಕರ ಸಂಖ್ಯೆ ಸಿಗುತ್ತದೆ. ಕುಂದಾಪುರ ಉಪ ವಿಭಾಗದ ಗ್ರಾಮಾಂತರ ಪೊಲೀಸ್ ಠಾಣೆಗಳಾದ ಗಂಗೊಳ್ಳಿ, ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕಂಡೂÉರು, ಅಮಾಸೆಬೈಲು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಗ್ರಾ.ಪಂ.ಗಳಲ್ಲಿ ಈ ಪ್ರಾಯೋಗಿಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಗೆ ಅನ್ವಯಿಸುವುದಿಲ್ಲ.
Related Articles
ಈ ಹೊಸ ಪ್ರಾಯೋಗಿಕ ವ್ಯವಸ್ಥೆ ಕುರಿ ತಂತೆ ಸೊಮವಾರದಿಂದ ಗುಜ್ಜಾಡಿ, ಅಂಪಾರು, ಕಂಡೂÉರು, ನೇರಳ ಕಟ್ಟೆ, ಮತ್ತಿತರ ಕಡೆಗಳಲ್ಲಿ ಹಾಕಲಾದ ತಾತ್ಕಲಿಕ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀ ಸರು ಮಾಹಿತಿ ನೀಡಿ ದ್ದಾರೆ. “ನಿಮಗೆ ಏನಾದರೂ ಅಗತ್ಯವಿದ್ದರೆ ನಿಮ್ಮ ವಾರ್ಡ್‌ಗೆ ಆಯ್ಕೆ ಮಾಡಿದ ಸ್ವಯಂ ಸೇವಕರಿಗೆ ಕರೆ ಮಾಡಿ. ಅವರೇ ಎಲ್ಲ ಅಗತ್ಯದ ವಸ್ತುಗಳನ್ನು ತಂದುಕೊಡುತ್ತಾರೆ.
ನೀವು ಮನೆಯಿಂದ ಹೊರ ಬರುವುದನ್ನು ಆದಷ್ಟು ಕಡಿಮೆ ಮಾಡಿ’ ಎಂದು ಪೊಲೀಸರು ಮನವಿ ಮಾಡಿದ್ದಾರೆ.
Advertisement
ಕೋವಿಡ್-19 ಟಾಸ್ಕ್ಫೋರ್ಸ್ಜನರು ಮನೆಯಲ್ಲೇ ಇರಬೇಕು. ಪೇಟೆಗೆ ಬರುವುದನ್ನು ತಪ್ಪಿಸಬೇಕು ಎನ್ನುವ ಸಲುವಾಗಿ ಮನೆ- ಮನೆಗೆ ಆಹಾರ ಸಾಮಗ್ರಿ ಪೂರೈಸುವ ಪ್ರಾಯೋಗಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಕಡ್ಡಾಯ ಅಲ್ಲ. ಎಲ್ಲರೂ ಸ್ವಯಂ ಪ್ರೇರಿತರಾಗಿ ಸಹಕರಿಸಿದರೆ ಒಳ್ಳೆಯದು. ಮನೆಯಲ್ಲೇ ಇದ್ದರೆ ನಿಮಗೆ ತೊಂದರೆಯಾಗದಂತೆ ಎಲ್ಲ ಅಗತ್ಯ ವಸ್ತುಗಳ ಪೂರೈಕೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ “ಕೋವಿಡ್- 19 ಟಾಸ್ಕ್ ಫೋರ್ಸ್’ ರಚಿಸಲಾಗಿದೆ.
– ಹರಿರಾಮ್ ಶಂಕರ್, ಎಎಸ್‌ಪಿ, ಕುಂದಾಪುರ ಉಪ ವಿಭಾಗ