Advertisement
ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಎಂಬ ಬೃಹತ್ ಲೋಕವನ್ನೇ ಧರೆಗಿಳಿಸಿರುವ ಡಾ.ಎಂ ಮೋಹನ ಆಳ್ವರು ಹಸಿದು ಬಂದವರಿಗೆ ರುಚಿ ಶುಚಿಕರವಾದ ಊಟ ನೀಡುವಲ್ಲಿ ಹಿಂದೆ ಉಳಿದಿಲ್ಲ. ಅಂದಹಾಗೆ ಇಲ್ಲಿ ಒಂದು ಹೊತ್ತಿಗೆ ಊಟ ಮಾಡುವವರ ಸಂಖ್ಯೆ ಎಷ್ಟು ಗೊತ್ತಾ? ಅದು ಬರೋಬ್ಬರಿ 70,000. ಹೌದು, ಇಷ್ಟು ಸಂಖ್ಯೆಯ ಜನರಿಗೆ ವಿದ್ಯಾಗಿರಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದು ಇನ್ನು ಏಳು ದಿನಗಳ ಕಾಲವೂ ಮುಂದುವರಿಯುತ್ತದೆ.
Related Articles
ಸಾರ್ವಜನಿಕರಿಗಾಗಿಯೇ ಕೃಷಿ ಮೇಳದ ಬಳಿ ಇರುವ ಬೃಹತ್ ಅಡುಗೆ ಮನೆಯಲ್ಲಿ 200 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯೇ 600 ಮಂದಿ ಸ್ವಯಂ ಸೇವಕರಿದ್ದಾರೆ. ಪ್ರತಿ ದಿನ 12 ಸಾವಿರ ಮಂದಿ ಬೆಳಗ್ಗಿನ ಉಪಹಾರ, 25 ಸಾವಿರ ಮಂದಿ ಮಧ್ಯಾಹ್ನದ ಊಟ ಮತ್ತು 30ರಿಂದ 40 ಸಾವಿರ ಸಾವರ್ಜನಿಕರಿಗೆ ರಾತ್ರಿಯ ಊಟ ಮಾಡಲಾಗುತ್ತಿದೆ. ಶನಿವಾರ ಮತ್ತು ರವಿವಾರ ಇದರ ಸಂಖ್ಯೆ ಹೆಚ್ಚಾಗುತ್ತದೆ.
Advertisement
ಇಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ, ಹಾಗಾದರೆ ಅತ್ಯಂತ ಸಿಂಪಲ್ ಆಗಿರಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಬೆಳಗ್ಗಿನ ಉಪಹಾರಕ್ಕಾಗಿಯೇ ಇಡ್ಲಿ- ಸಾಂಬಾರ್, ಶೀರಾ, ಉಪ್ಪಿಟ್ಟು ಅವಲಕ್ಕಿ, ಶೇವಿಗೆ ಬಾತ್ ಮಾಡಲಾಗಿದೆ. ಪ್ರತಿ ಬಾರಿಯೂ ಎರಡು ಬಗೆಯ ಸ್ವೀಟ್ಸ್ ನೀಡಲಾಗುತ್ತದೆ. ಇಲ್ಲಿ ಉತ್ತಮ ಊಟ ಉಪಹಾರವನ್ನೇ ಜನರಿಗೆ ನೀಡಲಾಗುತ್ತಿದೆ. ಬಂದ ಜನರು ಊಟ ಮಾಡಿ ಸಂತೃಪ್ತರಾಗಬೇಕು. ಅವರ ಸಂತಸವೇ ನಮ್ಮ ಉದ್ದೇಶ ಎನ್ನುತ್ತಾರೆ ಜಾಂಬೂರಿಯ ಸಂಪೂರ್ಣ ಅಡುಗೆಯ ಉಸ್ತುವಾರಿ ವಹಿಸಿರುವ ಚಂದ್ರಹಾಸ ಶೆಟ್ಟಿ.