Advertisement
ಶಿರ್ವ ಮೂಲದ ಅಮೆರಿಕ ಉದ್ಯಮಿ ಸಂತೋಷ್ ಟಿ. ಶೆಟ್ಟಿ ಅವರು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಆಪ್ತ ಸಹಾಯಕರೊಂದಿಗೆ ಚರ್ಚಿಸಿದ್ದು, ನಿಟ್ಟೆ ಗ್ರಾ. ಪಂಚಾಯತ್ ಮನೆ ನಂಬ್ರ ನೀಡಿದಲ್ಲಿ ಮನೆ ದುರಸ್ತಿ ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಎನ್ನಾರೈ ಉದ್ಯಮಿಗಳಾದ ಪ್ರದೀಪ್ ಶೆಟ್ಟಿ ಅಟ್ಟಿಂಜೆ ಮತ್ತು ಶಿರ್ವ ನಡಿಬೆಟ್ಟು ಸಂಗೀತಾ ಹೆಗ್ಡೆ ಅವರು ನೆರವಿನ ಭರವಸೆ ನೀಡಿದ್ದಾರೆ. MSRS ಕಾಲೇಜು ಹಳೆವಿದ್ಯಾರ್ಥಿ ಸಂಘ 25,000 ರೂ.ಗಳ ಚೆಕ್ ನೀಡಿದೆ. ಬೆಳ್ಮಣ್‌ನ ಹ್ಯುಮಾನಿಟಿ ಸೇವಾ ಸಂಸ್ಥೆ ಸೋಲಾರ್ ದೀಪ ಮತ್ತು ಫ್ಯಾನ್ ಅಳವಡಿಸಿದ್ದು, ಕಪಾಟೊಂದನ್ನು ನೀಡಿದೆ. ಬಂಟರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮತ್ತು ಡಾ| ಆಶಾಜ್ಯೋತಿ ರೈ ಚಿಕಿತ್ಸೆಗೆ ನೆರವಾಗುವ ಭರವಸೆ ನೀಡಿದ್ದಾರೆ.
– ಅಕ್ಷಿತಾ ಹೆಗ್ಡೆ