Advertisement

ಸಂಸತ್ತಿಗೆ ಸರಿಯಾಗಿ ಹಾಜರಾಗಿ : ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ತಾಕೀತು

09:15 AM Jul 17, 2019 | Team Udayavani |

ನವದೆಹಲಿ: ಪ್ರಸ್ತುತ ಸಾಗುತ್ತಿರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ತನ್ನ ಪಕ್ಷದ ಸಂಸದರ  ಗೈರು ಹಾಜರಾತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗರಂ ಆಗಿದ್ದಾರೆ. ಬಿಜೆಪಿಯ ಕೆಲ ಸಂಸದರು ಅಧಿವೇಶನಕ್ಕೆ ಪದೇ ಪದೇ ಗೈರಾಗುತ್ತಿರುವುದೇ ಮೋದಿ ಅವರ ಸಿಟ್ಟಿಗೆ ಕಾರಣವೆನ್ನಲಾಗುತ್ತಿದೆ. ಮತ್ತು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಅವರು ತಮ್ಮ ಈ ಸಿಟ್ಟನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

Advertisement

ಪಕ್ಷದ ಯಾವುದೇ ಸಂಸದರು ಯಾವುದೇ ದಿನದ ಕಲಾಪಕ್ಕೆ ಗೈರುಹಾಜರಾದಲ್ಲಿ ಆ ಕುರಿತಾದ ಸಮಜಾಯಿಷಿಯನ್ನುತನಗೆ ದಿನದ ಅಂತ್ಯದಲ್ಲಿ ಕಡ್ಡಾಯವಾಗಿ ನೀಡುವಂತೆ ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದಾರೆ ಮಾತ್ರವಲ್ಲದೇ ಇದಕ್ಕೆ ಸಂಬಂಧಿಸಿದಂತೆ ತನಗೆ ಮಾಹಿತಿ ನೀಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೂ ಮೋದಿ ಸೂಚಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಸರಕಾರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಯೋಜನೆಗಳಲ್ಲಿ ಸಕ್ರಿಯ ಪಾತ್ರ ವಹಿಸುವಂತೆಯೂ ಮೋದಿ ಈ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಹಾಗೂ ಸಾಮಾಜಿಕ ಪ್ರಾಮುಖ್ಯತೆಯನ್ನು ಹೊಂದಿರುವ ಕಾರ್ಯಕ್ರಮಗಳಲ್ಲಿ ಬಿಜೆಪಿ ಸಂಸದರು ಹೆಚ್ಚೆಚ್ಚು ಭಾಗವಹಿಸಬೇಕೆಂಬುದೂ ಸಹ ಪ್ರಧಾನಿ ಅವರ ಆಶಯವಾಗಿದೆ.

ರಾಜಕೀಯೇತರವಾಗಿಯೂ ಹಲವು ಜನಪರ ಕಾರ್ಯಗಳಲ್ಲಿ ಸಂಸದರು ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಆಶಯವನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಕುಡಿಯುವ ನೀರಿನ ಸಮಸ್ಯೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿಯೂ ಆಯಾಯ ಪ್ರದೇಶದ ಸಂಸದರು ಶ್ರಮಿಸಬೇಕು ಮತ್ತು ಇದಕ್ಕಾಗಿ ಅವರು ಸ್ಥಳೀಯಾಡಳಿತದ ಜೊತೆಗೂಡಿ ಜನಸಾಮಾನ್ಯರ ಸಹಭಾಗಿತ್ವವನ್ನು ರೂಪಿಸಬೇಕೆಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next