Advertisement

ನಾಲ್ವಡಿ ಒಡೆಯರ್‌ ಮಾದರಿ ಅನುಸರಿಸಿ

05:36 AM Jun 05, 2020 | Lakshmi GovindaRaj |

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್‌ ಈ ಬ್ಯಾಂಕ್‌ ಸಂಸ್ಥಾಪಕರು ಎಂದು ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಕೆ.ಉಮಾಶಂಕರ್‌ ಹೇಳಿದರು. ನಗರದ ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ನಲ್ಲಿ ರಾಜರ್ಷಿ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಪ್ರಯುಕ್ತ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

Advertisement

ರಾಜರ್ಷಿಗಳು ಕೇವಲ ಬ್ಯಾಂಕ್‌ ಮಾತ್ರವಲ್ಲದೆ ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾನಿಲಯ, ವಾಣಿವಿಲಾಸ  ಹೀಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಬಸವಣ್ಣನವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ರಾಮಕೃಷ್ಣ ಇತರರು ಇದ್ದರು.

ನಾಲ್ವಡಿ ಪ್ರತಿಮೆ ಎದುರು: ಮೈಸೂರು ಸಂಸ್ಥಾನವು ವಿಶ್ವಕ್ಕೆ ಮಾದರಿಯಾಗಿದೆ. ಮೈಸೂರು ನಿರ್ಮಾಣಕ್ಕೆ ನಾಲ್ವಡಿ ಅವರ ಕೊಡುಗೆ ಅಪಾರ ಎಂದು ನಾಲ್ವಡಿ ಅವರ ಪ್ರತಿಮೆಗೆ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್‌ ಮಾಲಾರ್ಪಣೆ ಮಾಡಿ  ಮಾತನಾಡಿದರು. ನಾಲ್ವಡಿ ಅವರು ಮನುವಾದಕ್ಕೆ ಇತಿಶ್ರೀ ಹಾಡಿ ಗೆಜ್ಜೆಪೂಜೆ, ದೇವದಾಸಿಯಂತಹ ಅನಿಷ್ಠ ಪದಟಛಿತಿಗಳಿಂದ ವಿಮುಕ್ತಿಗೊಳಿಸಿದರು.

ಎಲ್ಲಾ ಸಮಾಜದವರು, ವರ್ಗದವರಿಗಾಗಿ ಶಿಕ್ಷಣದ ಧಾರೆ ಎರೆಯಲು  ಹಾಗೂ  ವಿದ್ಯುತcಕ್ತಿ ನೀಡಿ ಮನೆ, ಮನೆಗಳಿಗೂ ಬೆಳಕನ್ನು ಚೆಲ್ಲಿದ ಮಹಾನ್‌ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ಮೈಸೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ  ವೆಂಕಟೇಶ್‌, ಮಾಜಿ  ಭೋವಿ ನಿಗಮದ ಅಧ್ಯಕ್ಷ ಸೀತಾರಾಮು, ವಿಶ್ವ, ಗುಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next