Advertisement

ವೈಜ್ಞಾನಿಕ ಕೃಷಿ ಪದ್ದತಿ ಅನುಸರಿಸಿ: ಡಾ|ಶ್ರೀನಿವಾಸ

12:28 PM Dec 27, 2021 | Team Udayavani |

ಆಳಂದ: ರೈತರು ಒಂದೇ ಬೆಳೆ ಅವಲಂಬಿಸದೇ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ತಜ್ಞ ಡಾ| ಶ್ರೀನಿವಾಸ ಬಿ.ವಿ ಸಲಹೆ ನೀಡಿದರು.

Advertisement

ತಾಲೂಕಿನ ನರೋಣಾ ಗ್ರಾಮದ ಪ್ರಗತಿಪರ ರೈತ ರಾಜೇಂದ್ರ ಎಸ್‌. ಸಂಗೋಳಗಿ ತೋಟದಲ್ಲಿ “ಬಸವೇಶ್ವರ ಸಮಾಜ ಸೇವಾ ಬಳಗ’ ವತಿಯಿಂದ ಏರ್ಪಡಿಸಲಾಗಿದ್ದ “ರಾಷ್ಟ್ರೀಯ ರೈತ ದಿನಾಚರಣೆ’ ಪ್ರಯುಕ್ತ ಪ್ರಗತಿಪರ ರೈತರಿಗೆ ಸತ್ಕಾರ, ಕೃಷಿ ವಿಜ್ಞಾನಿ-ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ರಸಗೊಬ್ಬರವನ್ನು ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ. ಜೈವಿಕ ಕೀಟನಾಶಕಗಳನ್ನು ಬಳಸಿ. ಬೆಳೆ ಬದಲಾವಣೆ ಪದ್ಧತಿ ಅತ್ಯವಶ್ಯಕವಾಗಿದೆ. ರೈತರು ಕೃಷಿ ವಿಜ್ಞಾನಿಗಳು, ಕೃಷಿ ಪಂಡಿತ, ಪ್ರಗತಿಪರ ರೈತರಿಂದ ಸೂಕ್ತ ಮಾಹಿತಿ ಪಡೆಯಬೇಕು ಎಂದರು.

ಯಾವುದೇ ಬಿತ್ತನೆ ಮಾಡಬೇಕಾದರೆ ಮಣ್ಣಿನ ಗುಣಮಟ್ಟ ಮತ್ತು ಬೆಳೆದ ಫಸಲಿಗೆ ಮಾರುಕಟ್ಟೆಯ ಬೇಡಿಕೆ ಗಮನದಲ್ಲಿ ಇಟ್ಟುಕೊಳ್ಳುವುದು ಪ್ರಮುಖವಾಗಿದೆ. ಪ್ರಸ್ತುತ ಸಂದರ್ಭಗಳಲ್ಲಿ ಸಿರಿ ಧಾನ್ಯಗಳಿಗೆ ಬಹು ಬೇಡಿಕೆ ಇರುವುದರಿಂದ ಅದರತ್ತ ರೈತರು ಚಿತ್ತ ಹರಿಸಬೇಕು. ಮಣ್ಣಿನ ಸವಕಳಿ ತಡೆಗಟ್ಟಿ. ಮಳೆ ನೀರಿನ ಕೊಯ್ಲು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.

ಪ್ರಗತಿಪರ ರೈತ ಶಿವಾನಂದ ಎಸ್‌. ವಾಲಿ ಮಾತನಾಡಿ, ರೈತರ ಬದುಕು ಹಸನಾದರೇ ಮಾತ್ರ ಸಮಾಜ ಸಮತೋಲನವಾಗಿರಲು ಸಾಧ್ಯ ಎಂದರು.

Advertisement

ಪ್ರಗತಿಪರ ರೈತರಾದ ಸೈಬಣ್ಣ ಬೋಧನ, ಶಿವಾನಂದ ವಾಲಿ, ಖೇಮಲಿಂಗಯ್ಯ ಸ್ವಾಮಿ, ಅನಿಲ ಆರ್‌.ಬುಕ್ಕಾ, ಖೇಮಲಿಂಗ ಎ. ನಿಂಬಾಳ್‌ ಅವರನ್ನು ಸತ್ಕರಿಸಲಾಯಿತು. ಬಸವೇಶ್ವರ ಸಮಾಜ ಸೇವಾ ಬಳಗದ ಎಚ್‌.ಬಿ. ಪಾಟೀಲ, ವೀರೇಶ ಬೋಳಶೆಟ್ಟಿ ನರೋಣಾ, ಚನ್ನಬಸಪ್ಪ ಗಾರಂಪಳ್ಳಿ, ಪರಮೇಶ್ವರ ದೇಸಾಯಿ, ರಾಜೇಂದ್ರ ಎಸ್‌.ಸಂಗೋಳಗಿ, ಶರಣಬಸಪ್ಪ ಆರ್‌. ಸಂಗೋಳಗಿ,ಬಸವರಾಜಆರ್‌.ಸಂಗೋಳಗಿ, ಸೂರ್ಯಕಾಂತ ಚಪ್ಪಳ್ಳಿ, ಭದ್ರಪ್ಪ ಸಾವಳಗಿ, ಲಕ್ಷ್ಮೀಪುತ್ರ ಚಿಮ್ಮಾಯಿ, ಗುರುರಾಜ ಆರ್‌. ವಾಲಿ, ಕಾಶಿನಾಥ ಸಾವಳಗಿ, ಶ್ರೀಶೈಲ ವಾಲಿ ಹಾಗೂ ಇನ್ನಿತರ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next