Advertisement

ಸುರಕ್ಷತಾ ಕ್ರಮ ಪಾಲಿಸಿ: ನಾಗೇಂದ್ರ

06:37 AM May 22, 2020 | Team Udayavani |

ಬಳ್ಳಾರಿ: ಮಹಾಮಾರಿ ಕೋವಿಡ್ ವೈರಸ್‌ ಸೊಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಧಿಕಾರಿಗಳಿಗೆ, ವೈದ್ಯರಿಗೆ, ಸಿಬ್ಬಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕು, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಕೋರಿದರು.

Advertisement

ನಗರದ ಕೌಲ್‌ ಬಜಾರ್‌ ಪ್ರದೇಶದಲ್ಲಿ ಗುರುವಾರ ಬಡವರಿಗೆ, ಕೂಲಿಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ಇಡೀ ಜಿಲ್ಲಾಡಳಿತ ಮಾರಕ ಕೋವಿಡ್ ವೈರಸ್‌ ತೊಲಗಿಸಲು ಹಗಲಿರುಳು ಶ್ರಮಿಸುತ್ತಿದ್ದು, ಅವರೊಂದಿಗೆ ನಾವೂ ಕೈಜೋಡಿಸಿ, ಸರ್ಕಾರದ ನಿಯಮಗಳನ್ನು ತಪ್ಪದೇ ಪ್ರತಿಯೊಬ್ಬರೂ ಪಾಲಿಸಬೇಕು, ಅಂದಾಗ ಮಾತ್ರ ರೋಗ ಹರಡುವಿಕೆಗೆ ಬ್ರೇಕ್‌ ಬೀಳಲಿದೆ. ತಂಬಾಕು ಜಿಗಿಯುವುದನ್ನು ನಿಲ್ಲಿಸಬೇಕು, ಜನನಿ ಬಿಡ ಪ್ರದೇಶದಲ್ಲಿ ಸದ್ಯಕ್ಕೆ ಸೇರಲೇಬಾರದು. ಮಾಸ್ಕ್ನ್ನು ತಪ್ಪದೇ ಧರಿಸಬೇಕು. ಆಗಾಗ್ಗೆ ಕೈತೊಳೆದುಕೊಳ್ಳಬೇಕು. ಸ್ಯಾನಿಟೈಸರ್‌ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ಲಾಕ್‌ಡೌನ್‌ ಜಾರಿಯಾದ ಬಳಿಕ ಕ್ಷೇತ್ರದ ಬಡಜನರಿಗೆ, ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಬೀದಿ ಬಳಿ ವ್ಯಾಪಾರಸ್ಥರು ಸೇರಿದಂತೆ ಇತರರಿಗೆ ತೊಂದರೆಯಾಗಿದೆ. ಈ ಹಿನ್ನೆಲೆ ಅವರಿಗೆ ಕೈಲಾದಷ್ಟು ನೆರವಾಗಲೆಂದು ಇಡೀ ಕ್ಷೇತ್ರ ವ್ಯಾಪ್ತಿಯ 60 ಸಾವಿರ ಬಡ ಜನರಿಗೆ ಆಹಾರ ಧಾನ್ಯಗಳ ಕಿಟ್‌ನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಕೊಳಿಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಬರುವ ದಿನಗಳಲ್ಲಿ ಅಗತ್ಯ ಬಿದ್ದರೇ ಇನ್ನಹೆಚ್ಚು ಕಿಟ್‌ಗಳನ್ನು ವಿತರಿಸುವೆ ಎಂದರು.

ಮುಖಂಡರಾದ ವೆಂಕಟೇಶ ಹೆಗಡೆ, ಬೂಡಾ ಮಾಜಿ ಅಧ್ಯಕ್ಷ ಹೂಮಾಯೂನ್‌ ಖಾನ್‌, ಕಾರ್ಯಕರ್ತರು, ಬೆಂಗಲಿಗರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next