Advertisement

ಸುರಕ್ಷಾ ಕ್ರಮ ಅನುಸರಿಸಿ: ಡಿಎಚ್‌ಒ

07:07 AM May 18, 2020 | Lakshmi GovindaRaj |

ಮಂಡ್ಯ: ಲಾಕ್‌ಡೌನ್‌ ಸಡಿಲಿಕೆ ನಂತರವೂ ಸುರಕ್ಷತಾ ಕ್ರಮಗಳ ಮೂಲಕ ಎಚ್ಚರಿಕೆ ವಹಿಸಿ ಕೊರೊನಾ ತೀವ್ರತೆ ತಡೆಗಟ್ಟಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಸಲಹೆ ನೀಡಿದರು.

Advertisement

ನಗರದಲ್ಲಿ ಡಿ.ದೇವರಾಜ ಅರಸು  ವೇದಿಕೆ, ಸಾಂಜೋ ಆಸ್ಪತ್ರೆ ಮತ್ತು ಸಾಂಥೋಂ ಸಂಸ್ಥೆ ಆಯೋಜಿಸಿದ್ದ ಕೊರೊನಾ ಮತ್ತು ಕಾಯಕ ಸಮಾಜಗಳ ಸ್ಥಿತಿಗತಿ ಕುರಿತ ಅವಲೋಕನ ಕಾರ್ಯಕ್ರಮದಲ್ಲಿ ವಿವಿಧ ಹಿಂದುಳಿದ ಸಮಾಜಗಳಿಗೆ ಆಹಾರ ಕಿಟ್‌ ವಿತರಿಸಿ ಮಾತನಾಡಿದರು. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ.

ಆದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ಲಾಕ್‌ಡೌನ್‌ನಲ್ಲಿ ಕೆಲವು ಸಡಿಲಿಕೆ ಸಿಕ್ಕರೂ ಸಾಮಾಜಿಕ  ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಕೆಯಂತಹ ಸುರಕ್ಷತಾ ಕ್ರಮಗಳನ್ನು ಮುಂದುವರಿಸಬೇಕು ಎಂದರು. ಕೊರೊನಾ ವೈರಸ್‌ಗೆ ಇದುವರೆಗೂ ಯಾವುದೇ ಔಷಧ-ಚುಚ್ಚುಮದ್ದು ಕಂಡು ಹಿಡಿಯದ ಕಾರಣ ಕೊರೊನಾ ಜೊತೆ  ಬದುಕುವ ಸ್ಥಿತಿ ಬಂದಿದೆ. ಕೊರೊನಾ ವಿರುದ್ದ ಹೋರಾಡುತ್ತಲೇ ನಮ್ಮ ಜೀವ ರಕ್ಷಿಸಿಕೊಳ್ಳಬೇಕು.

ವಿಶೇಷವಾಗಿ ಮಕ್ಕಳು, ಬಾಣಂತಿಯರು, ವೃದಟಛಿರು ಹೆಚ್ಚಿನ ಕಾಳಜಿ ಹೊಂದಬೇಕು ಎಂದರು. ದೇವರಾಜ ಅರಸು ಹಿಂದುಳಿದ  ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್‌, ಸಾಂಥೋಂ ಸಮಾಜ ಸೇವಾ ವಿಭಾಗದ ಮುಖ್ಯಸ್ಥ ಜೋಷ್‌ ಕುಟ್ಟಿ, ಹಿಂದುಳಿದ ಸಮಾಜದ ಮುಖಂಡರಾದ  ಕೃಷ್ಣ, ದಾಸ್‌ಪ್ರಕಾಶ್‌, ಸಿದ್ದಶೆಟ್ಟಿ, ಕಲಾವಿದ ಪ್ರಕಾಶ್‌, ಕಾಂತರಾಜು, ಸೋಮಣ್ಣ, ವೈರಮುಡಿ,ಪ್ರದೀಪ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next