Advertisement
ಏನಿದು ಫಾಲೋ ಮೀ ಟುಫೋಟೋ ಕ್ರೇಜ್ ಹೆಚ್ಚಾಗಿ ನಾನಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಅಧಿಕವಾಗಿರುತ್ತದೆ. ಈ ಫಾಲೋ ಮೀ ಟು’ ಕಾನ್ಸೆಪ್ಟ್ಸ್ ಫೋಟೋಗಳಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿಗಳ ಮುಖ ಕಾಣುವುದಿಲ್ಲ. ಬದಲಿಗೆ ಮುಂಭಾಗದಲ್ಲಿ ಭೇಟಿ ನೀಡಿರುವ ಸ್ಥಳ ಹಾಗೂ ಹಿಂಬದಿಯಲ್ಲಿ ಸಂಗಾತಿಯ ಇಲ್ಲವೇ ಸ್ನೇಹಿತನ ಕೈ ಹಿಡಿದ ಬೆನ್ನಿನ ಭಾಗ ಮಾತ್ರ ಕಂಡು ಬರುವ ಮಾದರಿಯಲ್ಲಿ ಫೋಟೋಗಳನ್ನು ಕಾಣುತ್ತೇವೆ. ಇಲ್ಲಿ ಸುಂದರ ತಾಣಗಳಲ್ಲಿ ಒಂದೂ ಬಗೆಯ ಹೊಸ ಫೋಟೋ ಪೋಸ್ ಅನ್ನು ಕಾಣಲೂ ಸಾಧ್ಯ. ಅಂದಹಾಗೆ ಈ ಟ್ರೆಂಡ್‌ನಲ್ಲಿ ಬ್ಯಾಕ್ ಗ್ರೌಂಡ್‌ನಲ್ಲಿರುವ ಕೈ ಹಿಡಿದ ಹುಡುಗನೇ ಫೋಟೋ ಕ್ಲಿಕ್ಕಿಸುವುದು ವಿಶೇಷ. ಮುಖದ ಅಂದಕ್ಕೆ ಇಲ್ಲಿ ಪ್ರಾಮುಖ್ಯತೆ ಇಲ್ಲ ಎನ್ನುತ್ತಾರೆ ಈ ಟ್ರೆಂಡ್ ಫಾಲೋ ಮಾಡುವವರು.
ಅಂದ ಹಾಗೆ, ಈ ಟ್ರೆಂಡ್ ನಿಧಾನಗತಿಯಲ್ಲಿ ಸಾಮಾನ್ಯ ಜನರನ್ನು ಸೆಳೆಯುತ್ತಿದೆ. ಪ್ರಯೋಗ ಮಾಡುವತ್ತ ಆಕರ್ಷಿಸಿದೆ. ಆದರೆ, ಈ ಟ್ರೆಂಡನ್ನು ಪ್ರಪಂಚದಾದ್ಯಂತ ತಿರುಗಿ ಹುಟ್ಟು ಹಾಕಿದವರು ತೈವಾನ್ನವರು. ತೈವಾನ್ನ ಜೋಡಿ ಪ್ರಪಂಚದಾದ್ಯಂತ ಸಂಚಾರ ಮಾಡುತ್ತಾ ಈಜಿಪ್ಟ್ ಸೇರಿದಂತೆ ನಾನಾ ಕಡೆ ತಿರುಗಿ ಆ ಸ್ಥಳದ ಫೋಟೋಗಳನ್ನು ಹೆಚ್ಚು ಹರಿದಾಡಿದ್ದವು. ಅದನ್ನು ನೋಡಿದ ಫೋಟೋ ಕ್ರೇಝ್ ಇರುವ ಟ್ರಾವೆಲ್ ಮಾಡುವ ಹುಡುಗಿಯರು ತಾವು ಕೂಡ ಇಂತಹದ್ದೇ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಟ್ರಾವೆಲ್ ಬ್ಲಾಗ್ ಹಾಗೂ ಜಾಲತಾಣಗಳಲ್ಲಿ ಹರಿಯಬಿಟ್ಟರು. ನಿಧಾನಗತಿಯಲ್ಲಿ ಆರಂಭವಾದ ಈ ಕ್ರೇಝ್ ಈಗ ಚಿಕ್ಕ ಪುಟ್ಟ ಐತಿಹಾಸಿಕ
ಸ್ಥಳ, ಇನ್ನಿತರ ಟೂರಿಸಂ ಸ್ಥಳಗಳಲ್ಲೂ ಕಂಡುಬರುತ್ತಿದೆ. ಇಲ್ಲಿ ಭೇಟಿ ನೀಡಿದ ಸ್ಥಳಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್
ಹಿಂದೆ ಕೆಮರಾ ಮೂಲಕ ಮಾತ್ರ ಇಂತಹ ಫೋಟೊ ತೆಗೆಯುತ್ತಿದ್ದ ಮಂದಿ ಇಂದು ಮೊಬೈಲ್‌ನಲ್ಲಿ ಈ ತರಹದ ಚಿತ್ರ ತೆಗೆಯುತ್ತಾರೆ. ಸೆಲ್ಫಿ ಫೋಟೋ ತೆಗೆಯುವವರ ಸಂಖ್ಯೆ ಹೆಚ್ಚಾದಂತೆ ಇಂತಹ ಫೋಟೋ ಕ್ಲಿಕ್ಕಿಸುವವರು ಅಧಿಕವಾಗಿದ್ದಾರೆ. ಅದರಲ್ಲೂ ನವ ಜೋಡಿಗಳು, ಪ್ರೇಮಿಗಳು, ಲಾಂಗ್ ಡ್ರೈವ್ ಪ್ರೀಯರಲ್ಲಿ ಈ ಬಗ್ಗೆಯ ಟ್ರೆಂಡ್ ಹೆಚ್ಚು ಕಾಣಬಹುದು. ಇಂತಹ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ, ಕಮೆಂಟ್‌ಗಳು ಬರುತ್ತವೆ. ಇದರಿಂದ ಟ್ರೆಂಡ್ ಫಾಲೋವರ್‌ಗಳ ಸಂಖ್ಯೆ ಕೂಡ ಅಧಿಕವಾಗಬಹುದು.
Related Articles
Advertisement