Advertisement

ಸಮಗ್ರ-ಮಿಶ್ರ ಕೃಷಿ ಪದ್ಧತಿ ಅನುಸರಿಸಿ

06:19 PM Feb 14, 2022 | Shwetha M |

ಬಸವನಬಾಗೇವಾಡಿ: ರೈತರು ಸಮಗ್ರ ಹಾಗೂ ಮಿಶ್ರ ಕೃಷಿ ಪದ್ಧತಿ ಅನುಸರಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ವಿಜಯಪುರ ಕೃಷಿ ವಿಸ್ತಾರಣಾ ಸಹ ನಿರ್ದೇಶಕ ಡಾ| ರವೀಂದ್ರ ಬೆಳ್ಳಿ ಹೇಳಿದರು.

Advertisement

ರವಿವಾರ ತಾಲೂಕಿನ ಯಂಭತ್ನಾಳ ಗ್ರಾಮದ ಶಿವಾನಂದ ಮಂಗಾನವರ ತೋಟದಲ್ಲಿ ನಡೆದ ದ್ರಾಕ್ಷಿ ಬೆಳೆ ಕ್ಷೇತ್ರೋತ್ಸವ, ಒಣ ದ್ರಾಕ್ಷಿ ಘಟಕ ಉದ್ಘಾಟನೆ ಹಾಗೂ ಪ್ರಗತಿ ಪರ ರೈತರಿಂದ ಅನುಭವ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಚಟುವಟಿಕೆಗಳಿಗೆ ಕೂಲಿ ಕೆಲಸದವರು ಸಿಗದೆ ಹಾಗೂ ಬೆಳೆದ ಬೆಳೆಗೆ ಸಮರ್ಪಕವಾಗಿ ಬೆಲೆ ಸಿಗದೆ ಇರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ರೈತರು ಕೇವಲ ಒಂದೇ ಬೆಳೆಗೆ ಅವಲಂಬಿತರಾಗದೆ ಸಮಗ್ರ ಮತ್ತು ಮಿಶ್ರ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಮಿಶ್ರ ಬೆಳೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.

ರೈತರು ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ, ಕುರಿ ಕೋಳಿ, ಮೀನು, ಇನ್ನಿತರ ಸಾಗಾಣಿಕೆ ಮಾಡುವದರ ಜೊತೆಗೆ ಏರೆ ಹುಳ ಸಾಗಾಣಿಕೆ ಮಾಡಬೇಕು. ಜೈವಿಕ ಗೊಬ್ಬರ ಕೃಷಿಗೆ ಬಳಸಬೇಕು. ರಾಸಾಯನಿಕ ಗೊಬ್ಬರದಿಂದ ರೈತರು ದೂರಾದಷ್ಟು ಉತ್ತಮ ಬೆಳೆ ಬೆಳೆಯಲು ಸಾಧ, ಜತೆಗೆ ಭೂಮಿಯ ಫಲವತ್ತತೆ ಕೂಡಾ ಹೆಚ್ಚಾಗುತ್ತದೆ ಎಂದರು.

ಸಾವಯುವ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ರೈತರು ಕೃಷಿ ಮಾಡುವ ಮೊದಲು 3 ಜ್ಞಾನವನ್ನು ಹೊಂದಿರಬೇಕು. ಉತ್ತಮವಾದ ಬೀಜ, ಕೃಷಿ ತರಬೇತಿ ಪಡೆಯಬೇಕು. ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು. ಅಂದಾಗ ಮಾತ್ರ ಆರ್ಥಿಕವಾಗಿ ರೈತರು ಸದೃಢರಾಗಲು ಸಾಧ್ಯ ಎಂದು ಹೇಳಿದರು.

Advertisement

ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಕೃಷಿ ಬದುಕಿಗೂ ಕನ್ನಡ ಜಾನಪದ ಸಾಹಿತ್ಯಕ್ಕೂ ಅನನ್ಯ ಸಂಬಂಧವಿದೆ. ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ರೈತ ಬಂಧುಗಳು ನಿರಂತರವಾಗಿದ್ದಾರೆ. ರೈತನಿಗೆ 3 ತಾಳಗಳು ಇರುತ್ತವೆ. ಒಂದು ತಾಳು ರೈತನಿಗಾಗದೆ. ಇನ್ನೊಂದು ತಾಳು ಸಮಾಜಕ್ಕೆ, ದಾಸೋಹ ಪ್ರೇಮಕ್ಕೆ ಸರ್ಕಾರಕ್ಕೆ ಮೀಸಲಾದರೆ, ಮತ್ತೊಂದು ತಾಳು ಪಕ್ಷಿ ಪ್ರಾಣಿಗಳಿಗೆ ಹೋಗುತ್ತದೆ. ದೇಶಕ್ಕೆ ಅನ್ನ ನೀಡುವ ಕೆಲಸಲ್ಲಿ ರೈತ ನಿರಂತರವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಾನೆ ಎಂದರು.

ಡೋಣೂರ ಗ್ರಾಪಂ ಅಧ್ಯಕ್ಷ ರವಿ ಮ್ಯಾಗೇರಿ, ಜಿಲ್ಲಾ ಕಜಾಪ ಅಧ್ಯಕ್ಷ ಬಾಳನಗೌಡ ಪಾಟೀಲ, ಸರ್ಕಾರಿ ನೌ.ಸಂ. ಜಿಲ್ಲಾಧ್ಯಕ್ಷ ಸುರೇಶ ಶಿರಸ್ಯಾಡ, ರೈತ ಮುಖಂಡ ಬಾಪುಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಷ್‌ ಕಲ್ಯಾಣಿ, ಶಿವನಗೌಡ ಬಿರಾದಾರ, ಸದಾನಂದ ದೇಸಾಯಿ, ಶರಣು ಮಾಸಾಳಿ, ಬಾಪುಗೌಡ ಬಿರಾದಾರ, ಕಲ್ಲನಗೌಡ ಬಿರಾದಾರ, ಅಜಯ ಅಜೀರ್ಮಿ, ಶೇಕರಗೌಡ ಅಂಗಡಿ, ಎಂ.ಎನ್‌. ಯಾಳವಾರ, ಎಂ.ಬಿ. ತೋಟದ, ಕಲ್ಲಣ್ಣ ದೇಸಾಯಿ ಸೇರಿದಂತೆ ಅನೇಕರು ಇದ್ದರು. ಶಿವಾನಂದ ಮಂಗಾನವರ ಸ್ವಾಗತಿಸಿದರು. ಎಸ್‌.ಐ. ಬಿರಾದಾರ, ಶಿವಾನಂದ ಮಡಿಕೇಶ್ವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next