Advertisement

ಜಾನಪದ ಆಚರಣೆ ಮಾನವೀಯ ಮೌಲ್ಯಗಳ ಆಗರ

07:12 AM Mar 01, 2019 | Team Udayavani |

ಚನ್ನಪಟ್ಟಣ: ಗಾಮೀಣ ಜನರ ಬದುಕಿನ ಹಾಸುಹೊಕ್ಕಾಗಿರುವ ಜಾನಪದ ಆಚರಣೆಗಳು ಮಾನವೀಯ ಮೌಲ್ಯಗಳ ಆಗರವಾಗಿದೆ ಎಂದು ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪುಷ್ಪ ಅಭಿಪ್ರಾಯಪಟ್ಟರು. ತಾಲೂಕಿನ ಕೋಡಂಬಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹುಚ್ಚಮ್ಮ ಜಾನಪದ ಸಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊದಿಗೆ ನಡೆದ ಜಾನಪದ ಗೀತಗಾಯನ, ಕಾವ್ಯ ಕಮ್ಮಟದಲ್ಲಿ ಮಾತನಾಡಿದರು.

Advertisement

ಇತ್ತೀಚಿನ ಆಧುನಿಕ ಆಡಂಬರ ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರಕ್ಕೆ ಸಿಲುಕಿ ಯುವ ಸಮೂಹ ನಮ್ಮ ನೆಲದ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಸಮೂಹ ಸಂಸ್ಕೃತಿಯ ಕಡೆಗೆ ವಾಲುವಂತೆ ಸರ್ಕಾರ ಹಲವು ರೀತಿಯ ಕಾರ್ಯಕ್ರಮ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ. ಜಾನಪದ ಕಲಾವಿದ ಉಳಿದಾಗ ಜನಪದ ಸಂಸ್ಕೃತಿ ಉಳಿಯುತ್ತದೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅವರಿಗೆ ಪುರಸ್ಕಾರ ಮನ್ನಣೆಗಳು ದೊರೆತಾಗ ಕಲಾವಿದ ಜೀವಂತಗೊಳ್ಳುತ್ತಾನೆ ಎಂದರು.

ಜಾನಪದ ಸಂಸ್ಕೃತಿ ಉಳಿವಿಗೆ ಶ್ರಮಿಸಿ: ಗಾಯಕ ಡಾ.ಬಿ.ಆರ್‌.ಶಿವಕುಮಾರ್‌ ಬ್ಯಾಡರಹಳ್ಳಿ ಮಾತನಾಡಿ, ಜಾನಪದ ಸಂಸ್ಕೃತಿ ಅಳಿವನಂಚಿನತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಅವರ ಉಳಿವಿಗೆ ಸಾಂಸ್ಕೃತಿಕ ರಾಯಬಾರಿಗಳು – ಸಾಹಿತಿಗಳು, ಕಲಾವಿದರು ಮುಂದಾಗಬೇಕು. ಯುವ ಕಲಾವಿದರನ್ನು ಪೋ›ತ್ಸಾಹಿಸಬೇಕು. ಕಲಾ ಪ್ರಕಾರಗಳ ಬಗ್ಗೆ ತಿಳಿಸಿ ತರಬೇತಿಗೊಳಿಸಬೇಕು. ಇತ್ತೀಚಿನ ದಿನಗಳ ಕಾಲಕ್ಕೆ ಒಗ್ಗುವಂತೆ ಆಕರ್ಷಿಸುವಂತೆ ರೂಪಿಸಬೇಕು ಎಂದರು.

ಜನಪದ ಮೂಲ ಸಂಸ್ಕೃತಿ: ಕಾಂಗ್ರೆಸ್‌ ಮುಖಂಡ ಸಿದ್ದರಾಮು ಮಾತನಾಡಿ, ಜಾನಪದ ಕಲೆಗಳು ಮನರಂಜನೆಗೆ ಸೀಮಿತಗೊಳ್ಳದೆ, ಶ್ರಮಕ್ಕೆ ತಕ್ಕಂತೆ ಹುಟ್ಟಿದ ಜನಪದ ಮಾನವೀಯ ಮೌಲ್ಯಗಳು ಸಾಮಾಜಿಕ ನ್ಯಾಯವನ್ನು ಪತ್ರಿಪಾದಿಸಿವೆ. ಜನಪದ ನೆಲಮೂಲ ಸಂಸ್ಕೃತಿಯ ರಾಯಭಾರಿಗಳು, ಸಾಂಸ್ಕೃತಿಕ ವಾರಸುದಾರರು ಮುಂದಿನ ಪೀಳಿಗಗೆ ಕೊಂಡೊಯ್ಯುತ್ತಿರುವ ಸಾರಥಿಗಳು ಅದರ ರಕ್ಷಾ ಕವಚವಾಗಿ ನಿಲ್ಲಬೇಕು ಎಂದರು. 

ಬೇವೂರು ರಾಮಯ್ಯ, ಹೊನ್ನಿಗನಹಳ್ಳಿ ಬಿ.ಸಿದ್ದರಾಜಯ್ಯ, ಶಿವಕುಮಾರ್‌ ಬ್ಯಾಡರಹಳ್ಳಿ, ದೊಡ್ಡಮಳೂರು ಎಂ.ಬಿ.ಮಹದೇವ್‌, ಜಾಗೃತಿ ಪುಟ್ಟಸ್ವಾಮಿ, ಎಸ್‌.ಬಿ.ಗಂಗಾಧರ್‌ ಸುಣ್ಣಘಟ್ಟ, ಪ್ರಸನ್ನ ಕುಮಾರ್‌, ಬಾಣಂತಹಳ್ಳಿ ಪ್ರಕಾಶ್‌ ಗಾಯನ ಪ್ರಸ್ತುತ ಪಡಿಸಿದರು. ಸೋಬಾನೆ ಕಲಾವಿದರಾದ ಕೆಂಚಮ್ಮ ಮತ್ತು ತಂಡ ಸುಣ್ಣಘಟ್ಟ, ರಂಜಿತ ಮತ್ತು ತಂಡ, ಹೊಡಿಕೆಹೊಸಹಳ್ಳಿ ಜಯಮ್ಮ ಮತ್ತು ತಂಡ, ಚಕ್ಕೆರೆ ಸೋಬಾನೆ ಪದಗಳನ್ನು ಹಾಡಿದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಚನ್ನಪ್ಪ, ಗ್ರಾಪಂ ನೌಕರ ಪ್ರಭಾಕರ್‌, ಕನಕ ಟ್ರಸ್ಟ್‌ನ ಅಧ್ಯಕ್ಷ ಪುಟ್ಟಸ್ವಾಮಿ, ಯುವ ಮುಖಂಡರಾದ ಶಿವಕುಮಾರ್‌, ಕೆ.ಎಂ. ಪ್ರವೀಣ್‌ ಕೋಡಂಬಹಳ್ಳಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಚಕ್ಕರೆ ಸಿದ್ದರಾಜು ಸ್ವಾಗತಿಸಿದರು. ಮಹೇಶ್‌ ಮೌರ್ಯ ನಿರೂಪಿಸಿದರು. ಬಾಣಂತಹಳ್ಳಿ ಪ್ರಕಾಶ್‌ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next