ಸಾಹಿತಿಗಳು ದಿಗ್ಗಜರು ಸಾಹಿತ್ಯದ ರಸದೌತಣ ನೀಡಿ ನಾಡಿನ ಉಸಿರಾಗಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
Advertisement
ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಕನ್ನಡ ಜಾನಪದ ಪರಿಷತ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಫೆಬ್ರವರಿ 25ರಂದು ಇಂಡಿ ತಾಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನ ಸಾಲೋಟಗಿಯಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ. ಈ ಹಿಂದೆ ಕಸಾಪ ಸಮ್ಮೇಳನ ಮಾಡಿ ಕನ್ನಡದ ಸವಿಯನ್ನು ತಾಲೂಕಿನಾದ್ಯಂತ ಪಸರಿಸಿ ಕನ್ನಡದ ಭಾಷೆ ಬಗೆಗೆ ಜಾಗೃತ ಮಾಡಿರುವದು ತಾಲೂಕಿಗೆ ಸಂದಗೌರವ ಎಂದರು.
ಕೆಲಸ ಮಾಡುವಾಗ ಹಾಡುವ ಮೂಲಕ ತಮ್ಮ ಆಯಾಸ ಕಳೆದುಕೊಳ್ಳುತ್ತಿದ್ದರು. ಇಂದು ಅಧುನಿಕ ಪ್ರಪಂಚದ ಸೆಳೆತಕ್ಕೆ ಸಿಕ್ಕು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ನಮ್ಮ ಶ್ರೀಮಂತ ಜಾನಪದ ಸಾಹಿತ್ಯ ಮರೀಚಿಕೆಯಾಗುತ್ತಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಜಾನಪದ ಗ್ರಾಮಿಣ ಭಾಗದಲ್ಲಿ ಹುಲಸಾಗಿ ಬೆಳೆದಿರುವ
ಸಾಹಿತ್ಯವಾಗಿದೆ. ಅಂದು ತಾಯಂದಿಯರು ತಮ್ಮ ಮಕ್ಕಳನ್ನು ಸಂತೈಸುವಾಗ ಸೊಗಸಾದ ಜಾನಪದಗಳನ್ನು ಹಾಡಿ
ಮಲಗಿಸುತ್ತಿದ್ದರು. ಇಂತಹ ಸಾಹಿತ್ಯ ಮತ್ತೆ ಬೆಳೆಸಬೇಕಾಗಿದೆ. ನಾಡು, ನುಡಿ, ಭಾಷೆ ಧಾರ್ಮಿಕತೆಗೆ ಯಾವತ್ತೂ ನನ್ನ ಸಹಾಯ ಸಹಕಾರವಿದೆ ಎಂದರು. ಸಾಲೋಟಗಿ ಜಿಪಂ ಸದಸ್ಯ ಮತ್ತು ಕಜಾಪ ಕಾರ್ಯಾಧ್ಯಕ್ಷ ಶಿವಯೋಗೇಪ್ಪ ನೇದಲಗಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಬೇಕು. ಸಮ್ಮೇಳನ ಯಶಸ್ವಿಯಾಗಲು ಮೇಲಿಂದ ಮೇಲೆ ಸಭೆಗಳನ್ನು ನಡೆಸಬೇಕು. ಎಲ್ಲ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿ ಜಾನಪದ ಮರು ಕುರುಹುಗಳನ್ನು ಮನ ಮುಟ್ಟುವಂತೆ ತಿಳಿ ಹೇಳಬೇಕು ಎಂದರು.
Related Articles
ಸಿ.ಆರ್. ಮ್ಯಾಕೇರಿ, ಜಿಲ್ಲಾ ಸದಸ್ಯ ಎಂ.ಪಿ. ಭೈರಜಿ, ಆರ್.ಡಿ. ಕಂಡಾಳ, ಬಿ.ಐ. ಬಿರಾದಾರ, ಕೆ.ಎ. ತೆಲಸಂಗ,
ಎಸ್.ಎಸ್. ಈರನಕೇರಿ, ಆರ್.ಎಸ್. ಪಾಟೀಲ, ಎನ್.ಎ. ಬಿರಾದಾರ, ಎಂ.ಎಸ್. ಪಾಟೀಲ, ಎಸ್.ಬಿ.
ಜಮಾದಾರ, ಎನ್.ಎಲ್. ಹಚಡದ ಇದ್ದರು.
Advertisement