ಚಿತ್ತಾಪುರ: ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ಜಾನಪದ ಪ್ರತಿಭೆಗಳು ಹೊರತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಹಲಕರ್ಟಿ ಕಟ್ಟಿಮನಿ ಮಠದ ಪೀಠಾಧಿಪತಿ ಶ್ರೀ ಮುನೀಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರ ಹಳ್ಳದ ಮಠದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಶ್ರೀ ಗುರುಲಿಂಗೇಶ್ವರರ 13ನೇ ಪುಣ್ಯಾರಾಧನೆ ಹಾಗೂ ತಾಲೂಕು ಮಟ್ಟದ ಜಾನಪದ ಗಾಯನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳು ಜೀವಂತ ಇದ್ದರೂ ಪ್ರಚಾರ ಹಾಗೂ ಹೊರತರುವ ಕೆಲಸ ಮಾಡದೇ ನಶಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಉದ್ಘಾಟಿಸಿದರು.
ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಯರಗೋಳದ ಸಂಗಮನಾಥ ಶಿವಾಚಾರ್ಯರು, ಅಳ್ಳೋಳ್ಳಿಯ ಶ್ರೀ ಸಂಗಮನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಕಂಚಗಾರ ಹಳ್ಳ ಮಠದ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಸದಸ್ಯ ಮಹಾದೇವಿ ಅವಂಟಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ, ಜಿಪಂ ಸದಸ್ಯ ಶಿವರುದ್ರ ಭೀಣಿ, ಮುಖಂಡರಾದ ಚಂದ್ರಶೇಖರ ಕಾಶಿ, ರಮೇಶ ಚವ್ಹಾಣ, ದೇವಿಂದ್ರ ಸೀಬಾ,
ತಮ್ಮಣ್ಣ ಡಿಗ್ಗಿ, ಜಗನ್ನಾಥ ಸಂಗಾವಿ, ಚನ್ನವೀರ ಕಣಗಿ, ಬನಶಂಕರ, ಮಲ್ಲಿನಾಥ ದುಪ್ಪಲ್ಲಿ, ಡಾ| ವೆಂಕಟೇಶ ಇದ್ದರು ವಿವಿಧ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಚನ್ನವೀರ ಕಣಗಿ ಸ್ವಾಗತಿಸಿದರು. ಮಲ್ಲಶೆಟ್ಟೆಪ್ಪ ಸಂಗಾವಿ ನಿರೂಪಿಸಿದರು. ಶರಣು ಸ್ಥಾವರಮಠ ವಂದಿಸಿದರು.